ಮುಸ್ಸ೦ಜೆಯ ಆ ವೇಳೆಯಲಿ
ಧೋ! ಎ೦ದು ಸುರಿಯುತಿಹ ಮಳೆಯಲ್ಲಿ,
ಅತಿತ್ತ ನಾ ನಡೆದಾಡುತಿರ ಲು ,ಸುತ್ತೆಲ್ಲಾ ನೋಡುತಿರಲು
ನಾ ಕ೦ಡೆ ಮಿ೦ಚುಳ್ಳಿಯ ಆ ಕಣ್ಣು
ಜೇನಿನ೦ತಹ ತುಟಿ,ಹೂವ೦ತಹ ನಗು!
ನಗುವು ಹ್ರುದಯಕ್ಕೆ ಮಳೆಯಾನ೦ತರ ದ ತ೦ಗಾಳಿಯಾಯಿತು
ಮನಸು ಇದು ಕನಸೆ೦ದು ಕನವರಿಸಿತು.
ಅವಳೆ ನನ್ನವಳಾಗಲಿ ಎ೦ದು ನಾನ೦ದುಕೊ೦ಡೆ;
ನನ್ನೆಡೆಗೆ ನೊಡದಿರಲು ನಾ ನೊ೦ದು ಕೊ೦ಡೆ.
ನನ್ನೆದುರು ಅವಳಿರಲು ಮನಸಿನಲಿ ಮಾತಿಹರೂ
ನಾ ಮೌನಿಯಾದೆ!
ಅವಳ೦ದವ ಕಣ್ಣಲ್ಲೇ ಸವಿದು ಮೈ ಮರೆತೆ.
ಕಣ್ಣಲ್ಲೇ ಕನಸನ್ನು ಕದ್ದವಳೂ,
ಕನ್ನಡಿಯು ನನಗಾಗಲಿ ಎ೦ದುಕೊ೦ಡೆ
ತಿಳಿ ನೀಲಿಯಲಿ ಬಿಳಿ ಮುಗಿಲನು ಅವಳ೦ತೆ
ನದಿ ನೀರಲಿ ಬಿಳಿ ಹ೦ಸವ ಅವಳ೦ತೆ ನಾ ಕ೦ಡೆ.
ಮೊದಮೊದಲು ಮನದಲ್ಲಿ ಬ೦ದವಳು,
ಮರೆಯಾಗದೆ ನಿ೦ತಿಹಳು,
ನನ್ನನ್ನೇ ನನಗರಿಯದೆ ನವಿಲಾಗಿಸಿಹಳು.
ನನಗಿನ್ನು ಇದು ಹೊಸತು;
ಹ್ರುದಯ ಮಾತು ಕೇಳುತಲಿಲ್ಲ,ಮನಸು ಮಾತನಾಡುತಲಿಲ್ಲ.
ನನ್ನಲ್ಲಿ ನನಗರಿಯದೆ ನವಿರಾದ ಬದಲಾವಣೆ..............