ಪುಟಗಳು

Friday, January 20, 2012

ಕನಸು


ಮು೦ಜಾವಿನ ಸವಿ ನಿದಿರೆಯಲಿ,ಕನಸೊ೦ದ ನಾ ಕ೦ಡೆ,
ಅದಾವುದೋ ಕಾಡಿನ ದಾರಿಯಲಿ ಮುಸುಕಿದ ಮ೦ಜಿನ ಮಳೆಯಲ್ಲಿ
ನಾನೊಬ್ಬ ಏಕಾ೦ಗಿ;ನಡೆಯುತಿದ್ದೆ ಎತ್ತಲೋ.. ನನ್ನೊಳಗಿತ್ತು ಕತ್ತಲು!
ಮೆದುವಾಗಿ ನಡೆಯುತಿದ್ದೆ, ಗುರಿಯೊ೦ದ ಎಣಿಸುತಿದ್ದೆ,
ಹೊ೦ಬಿಸಿಲಿಗೆ ಮೈಯೊಡ್ಡಿ ನಡೆಯುತಿತ್ತು ಪಯಣ.

ತಣ್ಣನೆಯ ಹಸಿ ಮೌನದಿ ದೊರಕಿತು ನನ್ನೊಳಗೆ ಏನೋ.......?
ಮ್ರುದುವಾಗಿ ಮಾತಿಗೆಳೆಯಿತು,
ನಡೆದು ಸವೆಸಿದ ಹಾದಿಯ ತೋರಿಸಿ ಕೆಣಕಿತು....
ನಾ ನೊ೦ದುಕೊ೦ಡೆ ಒಮ್ಮೆ!!
ಮುಸಿನಗುತ ನನಗೆ೦ದಿತು; ’ಎಲೆ ಮ೦ಕೆ....
ಹೇಗಿದ್ದೆ ಹೇಗಾದೆ...?ಯಾಕೆ ನೀ ಹೀಗಾದೆ....?’
ಅಳುಕಿತು ಒಮ್ಮೆ ಮನವು,ಆದರೂ ಸಾವರಿಸಿಕೊ೦ಡೆ.

ಆಣಕಿಸುವ೦ತೆ ನಗುತಿತ್ತು! ಕಣ್ಣಲ್ಲಿ ಕಣ್ಣಿಟ್ಟಿ ನೋಡುತ್ತಾ....
ಕ್ಶಣ ಕಾಲ ಚಿ೦ತಿಸಿದೆ, ಕೆಲ ಕಾಲ ಯೋಚಿಸಿದೆ....
ನಸು ನಕ್ಕು ನಾನ೦ದೆ;
ನನ್ನೊಳಗೆ ನೀನಿರಲು,ನಿನ್ನನ್ನೆ ನ೦ಬಿರಲು
ನನಗೆ೦ದು ಭಯವಿರದು!!!!!!!!
ನಾನಿ೦ದು ಸೋತಿರಬಹುದು,ನನ್ನ ಮು೦ದೆ ಗೆಲುವಿದೆಯೆ೦ದು ಅನಿಸಿಹುದು,
ನಾ ನಡೆವೆ ನನ್ನ ದಾರಿಯಲಿ ಜೊತೆಯಲ್ಲಿ ನೀನಿರಲು!!!!!!!!!!!!!!!!