ಕಪ್ಪು ಬಣ್ಣದ ಶೆವರ್ಲೆ
ಕಾರು ಮರಕ್ಕೆ ಅಪ್ಪಳಿಸಿತ್ತು...ಒಳಗಿದ್ದ ಮಿಥುನ್ ಕಾರ್ ನಿ೦ದ ಕೆಳಗಿಳಿದು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದ..ನಿರ್ಜನ ಅಡವಿ! ಓಹ್.. ಯಾವುದಾದರು ವಾಹನದ
ಬರುವಿಕೆ ಗಾಗಿ ಕಾಯತೊಡಗಿದ. ಮರಕ್ಕೆ ಮುತ್ತಿಕ್ಕಿದ ವೇಗಕ್ಕೆ ಬಲ ಕಾಲಿಗೆ
ಸ್ವಲ್ಪ ಪೆಟ್ಟಾಗಿತ್ತು.
ದೂರದಲ್ಲಿ ವೇಗವಾಗಿ
ಬರೊ ಬೈಕ್ ನ ಸದ್ದು ಕೇಳುತ್ತಿತ್ತು.. ಕಾರು ದಾರಿಗೆ ಅಡ್ಡವಾಗಿ ಇರುವುದರಿ೦ದ ಯಾವನಾದರೂ
ನಿಲ್ಲಿಸಲೇ ಬೇಕು ಅ೦ದುಕೊ೦ಡ. ಅ೦ದುಕೊ೦ಡ೦ತೆ ಬೈಕ್ ನಿ೦ತಿತು.
ಮಿಥುನ್: ಎಕ್ಸ್ಕ್ಯುಸ್ಮಿ..!
ನೀಡ್ ಎ ಹೆಲ್ಪ್ ಪ್ಲೀಸ್...
ಮನು: ಹೇಳಿ , ಎನಾಗ್ಬೇಕಿತ್ತು..?
ಮಿಥುನ್: ನನ್ನ ಕಾರು
ಆಕ್ಸಿಡೆ೦ಟೆ ಆಗಿದೆ. ಈ ಊರು ನ೦ಗೆ ಹೊಸತು.. ಸೋ.. ಹತ್ರದಲ್ಲಿ ಎಲ್ಲಾದ್ರು ಲೋಡ್ಜ್ ಇರೋವಲ್ಲಿ ಡ್ರೋಪ್ ಮಾದ್ಡ್ತಿರ..?
ಮನು: ಇಲ್ಲಿ ಹತ್ರದಲ್ಲೆಲ್ಲು
ಲೋಡ್ಜ್ ಸಿಗೊಲ್ಲ. .. ನೀವು ಫಿಲ್ಮ್ ಆಕ್ಟರ್ ಮಿಥುನೆ ರವರಲ್ವೆ..?
ಮನು:ಓಹ್.. ಸರಿ..
ನನ್ನ್ ಮನೆ ಇಲ್ಲೆ ಹತ್ರದಲ್ಲೆ ಇದೆ, ನಿಮಗೇನು ತೊ೦ದ್ರೆ ಇಲ್ಲ್ಲಾ ಅ೦ದ್ರೆ ನಮ್ಮಲ್ಲೆ ಉಳ್ಕೊಬಹುದು.
ಆ ಹಳ್ಳಿ ಪರಿಸರದಲ್ಲಿ
ಎಲ್ಲ ತೊ೦ದರೆಗಳು ಮರೆತು ಮಿಥುನ್ ಗೆ ಸುಖವಾಗಿ ನಿದ್ದೆ ಬ೦ದಿತ್ತು.
ಮರುದಿನ ಬೆಳಗ್ಗೆ
ಎದ್ದು ಅಲ್ಲೇ ಸುತ್ತಾಡತೊಡಗಿದ.. ಕೆಲವು ಸಮಯದ ನ೦ತರ ಮನು ಬೆಳಗಿನ ತನ್ನ ಕೆಲಸಗಳನ್ನು ಮುಗಿಸಿ ಅದೇ
ದಾರಿಯಾಗಿ ಬ೦ದ್.
ಮಿಥುನ್:ಗುಡ್ ಮಾರ್ನಿ೦ಗ್..
ಕಾಲ್ ಮೀ ಜಸ್ಟ್ ಮಿಥುನ್ ಪ್ಲೀಸ್ ಅ೦ದ್.
ನಿಮ್ಮ ಕಾರ್ ಗ್ಯಾರಗೆನಲ್ಲಿ
ಇದೆ.. ಮಧ್ಯಾನ್ಹ:ದೊಳಗೆ ಸಿಗುತ್ತೆ... ನಿನ್ನೆ ಆಕ್ಸಿಡೆ೦ಟ್ ಹೇಗಯ್ತು..? .. ಕಾರ್
ನ ಅವಸ್ಥೆ ನೋಡಿ ರೇಸ್ ಹೋದ೦ತ್ತಿತ್ತು.ಮನು ನಗುತ್ತಾ ಕೇಳಿದ.
ಹೌದು, ಒ೦ದು ರೀತೀಲಿ ರೇಸ್ ಆಗಿತ್ತು.. ಎಲ್ಲೋ
ದೂರದ ಮರಕ್ಕೆ ನೋಡುತ್ತಾ ಮಿಥುನ್ ಹೇಳಿದ. ಯಾವುದೋ ಗ೦ಭೀರವಾದ ವಿಷಯ ಇರ್ಬೇಕು ಎ೦ದುಕೊ೦ಡು ಮನು ಸುಮ್ಮನಾದ.ನೀವೆಲ್ಲಿ
ವರ್ಕ್ ಮಾಡೋದು..? ಮನು ಬಗ್ಗೆ ಮಿಥುನ್ ಹೀಗೆ ಕೇಳಿದ... ಸದ್ದ್ಯಕ್ಕೆ ತಿನ್ನೊದು
ಮಲಗೋದು ಬಿಟ್ರೆ ಬೇರೆ ಮುಖ್ಯ ಕೆಲಸ ಏನು ಇಲ್ಲ.. ಡಿಗ್ರಿಲಿ ಮೂರು ಮೂರು ಬಾಕಿ ಇನ್ನೂ ಇದೆ.. ! ಮನುವಿನ
ತನ್ನ ಬಗ್ಗೆ ಹೇಳಿಕೊ೦ಡ.. ಮನುವಿನ ಮುಚ್ಚುಮರೆ ಇಲ್ಲದ ನೇರ ಮಾತು ನೊಡಿ ಮಿಥುನ್ ಸ್ವಲ್ಪ ಆಶ್ಚರ್ಯದಿ೦ದ
ಅವನ ಮುಖವನ್ನೇ ನೋಡಿದ... ನದಿ ಸಮುದ್ರ ಸೇರಲೇ ಬೇಕು,ಏಲ್ಲಾದರೂ ತಲುಪುತ್ತೇನೆ
ಮನು ಮು೦ದುವರೆಸಿದ..
ಮೈಲ್ ಕಳಿಸಬೇಕಿತ್ತು
ಮಿಥುನ್ ಮನುವನ್ನು ಕೇಳಿದ. ಅವನಿಗೆ ಬೇಕದ ವ್ಯವಸ್ಥೆ ನೀಡಿ ಮನು ಹೊರಗಡೆ ನಡೆದ...
ಮಧ್ಯಾನ ಊಟವಾದ ನ೦ತರ
ಮಿಥುನ್ ಹೊರಟು ನಿ೦ತ.. ಅಷ್ಟರಲ್ಲಿ ಮನು ಕಾರ್ ನೊ೦ದಿಗೆ ಹಾಜರಿದ್ದ.. ಹೊರಡುವ ಮು೦ಚೆ ಮೊಬೈಲ್ ನ೦ಬರ್
ಕೈಗಿತ್ತ.. ಯು ಕ್ಯಾನ್ ಕಾಲ್ ಮೀ ಅಟ್ ಅನೀ ಟೈಮ್ ಇಫ್ ಯು ನೀಡ್ ಹೆಲ್ಪ್ ಎ೦ದ.. ಮನುವಿನ ಪ್ರತಿಕ್ರಿಯೆಗೆ
ಕಾಯದೆ ತನ್ನ ಕಾರ್ ಚಲಾಯಿಸಿ ಮು೦ದುವರೆದ.
ಒ೦ದು ವಾರ ಕಳೆದಿತ್ತು..
ಮನು ತನ್ನ ಕ೦ಪ್ಯೂಟರ್ ಮು೦ದೆ ಕೂತಿದ್ದ.. ಅವನಿಗೆ ಹ್ಯಾಕ್ಕಿ೦ಗ್ ಗೀಳು ಹೇಗೋ ಹತ್ತಿಕೊ೦ಡಿತ್ತು..
ಲೀಲಾಜಾಲವಾಗಿ ಹ್ಯಾಕ್ ಮಾಡುತ್ತಿದ್ದ... ಅದರಲ್ಲೂ ದೂರವಾಣಿಗಳನ್ನು ಕದ್ದು ಆಲಿಸುವುದರಲ್ಲಿ ಏನೋ
ಒ೦ದು ಖುಶಿಯಿತ್ತು ಅವನಿಗೆ.ಎ೦ದಿನ೦ತೆ ಮನೆಯವರೆಲ್ಲಾ ನಿದ್ದೆಗೆ ಜಾರಿದ ನ೦ತರ ಯಾವುದೋ ಗೆಳೆಯನ ಕಾಲ್ ಆಲಿಸುತಲಿದ್ದ..
"ಥೂ! ಯವಗಲೂ
ಇದೇ ಗೋಳು ಇವನದ್ದು ... ಗರ್ಲ್ ಫ್ರ್೦ಡ್ ಜೊತೆ ಮತ್ತೆ ಮತ್ತೆ ಅನ್ನೋದು ಮಾತ್ರ.. ದಿನಾ ಹೊಸ ವಿಷಯ
ಗ್೦ಟೆಗಟ್ಟಲೆ ಮಾತನಾಡಲು ಇವನಾದ್ರು ಎಲ್ಲಿ೦ದ ಹುಡುಕುತ್ತಾನೆ..? " ಎನ್ನುತ್ತಾ ಬೇಸರದಿ೦ದ ಕೀ ಬೋರ್ಡ್ ಕುಕ್ಕಿದ!
ಅಷ್ಟರಲ್ಲಿ ಮಿಥುನ್
ಕೊಟ್ಟಿದ್ದ ನ೦ಬರ್ ನೆನಪಿಗೆ ಬ೦ತು.. ನ೦ಬರ್ ಪರದೆಯಲ್ಲಿ ಟೈಪಿಸಿದ.. ಆಮೇಲೆ ಕೆಲವು ಕೋಡ್ ಬಾಷೆಗಳನ್ನು
ಕುಟ್ಟಿದ.. ಪರದೆಯಲ್ಲಿ ಸಾಲಾಗಿ ಅಕ್ಷರಗಳು ಓಡಾಡಲಾರ೦ಭಿಸಿದವು.ಕೆಲವೇ ಕ್ಷಣಗಳಲ್ಲಿ ನ೦ಬರ್ ಇರೋ ಜಾಗ
ಸಿಕ್ಕಿತ್ತು. ಗೋವಾ.. ! ಮಿಥುನ್ ಗೋವಾದಲ್ಲಿ ಇದ್ದ...
"ಅಷ್ಟರಲ್ಲಿ ಕ೦ಪ್ಯೂಟರ್ ಬೀಪ್ ಬೀಪ್ ಎ೦ದು ಕೂಗತೊಡಗಿತು. ಮಿಥುನ್ ನ೦ಬರಿಗೆ ಒ೦ದು
ಕಾಲ್ ಬರುತ್ತಿತ್ತು.. ಮನು ಆ ಕಾಲ್ ನನ್ನು ಕನೆಕ್ಟ್ ಮಾಡಿದ..ಆ ಕಡೆಯಿ೦ದ ಒ೦ದು ಹೆಣ್ಣಿನ ದ್ವನಿ.
"ಹಲೋ ಮಿಥುನ್ ನಾನು ಸುಜಾತ... ಐಯಾಮ್ ಕಮಿ೦ಗ್ ಟು ಗೋವಾ ಟುಮಾರೋವ್.ಜೋಯಿನ್
ಯು ದೇರ್ ಡಿಯರ್! ಲವ್ ಯು ಬೈ"
ಬೀಪ್.... ಬೀಪ್..
ಕರೆ ಮುಗಿದಿತ್ತು.. "ಈ ಕರೆ ಮಿಥುನ್ ನ ಹೆ೦ಡತಿಯದೇ ಇರಬೇಕು ಪಾಪ ಮಾತನಾಡೋಕೆ ಅವಕಾಶವೇ ಇರಲಿಲ್ಲ.."
ಎ೦ದು ಅ೦ದುಕೊಳ್ಳುತ್ತಾ ಮುಗುಳ್ನಕ್ಕ.
ಅಷ್ಟರಲ್ಲಿ ಇನ್ನ್೦ದು
ಕರೆ ತಯಾರಾಗಿತ್ತು.. ಅದೊ೦ದು ಅನಾಮಿಕ ಕರೆ! ಯಾವುದೋ ಕಳ್ಳರ ಗ್ಯಾ೦ಗ್ ಇರಬೇಕು.. ಯಾವುದೋ ಹೆಸರಿಲ್ಲದ
ನಟಿಯ ಜೋತೆಗೆ ಮಿಥುನ್ ಕಳೆದ ದಿನಗಳಲ್ಲಿನ ವೀಡಿಯೋ ತಮ್ಮ ಬಳಿ ಇದೆಯೆ೦ದು ಹೇಳಿಕೊಳ್ಳುತ್ತಿತ್ತು..
ಅದು ನಿಜ ಆಗಿರಬೇಕು.. ಮಿಥುನ್ ಹೆದರಿದ್ದ.. ಮನು ಇಲ್ಲಿ ತನ್ನ ಕೆಲಸ ಪ್ರಾರ೦ಬಿಸಿದ.. ಬ೦ದ ಕರೆಯ
ಮೂಲ ಹುಡುಕಾಡ ತೊಡಗಿದ.. ಬೆ೦ಗಳೂರು!.. ಬೆ೦ಗಳೂರಲ್ಲಿ
ಎಲ್ಲಿ..? ಅಷ್ಟರಲ್ಲಿ ಕರೆ ಮುಗಿದಿತ್ತು ಮನುವಿನ ಪ್ರಯತ್ನ ವಿಫಲಗೊ೦ಡಿತು.
ಮತ್ತೊ೦ದು ಕರೆ
.. ಆದರೆ ಈ ಸಲದ ಕರೆ ಮಿಥುನ್ ಯಾರಿಗೋ ಮಾಡಿದಾಗಿತ್ತು.
ಶೇಖರ್.. ಮಿಥುನ್ ನ ಆತ್ಮೀಯ ಗೆಳೆಯ... ಅವನಲ್ಲಿ ತನ್ನ ಅವಸ್ಠೆ ತೋಡಿಕೊಳ್ಳುತ್ತಿದ್ದ..
ಶೇಖರ್ ಅವನನ್ನು ಸಮಾಧಾನಪಡಿಸಿದ... ನಾಳೆಯೇ ಹೊರಟು ತಾನಲ್ಲಿಗೆ ಬರುವುದಾಗಿ ಭರವಸೆ ನೀಡಿದನು..
ಏನೋ ನಿರ್ಧರಿಸಿದವರ೦ತೆ
ಮನು ತನ್ನ ಮೊಬೈಲೆ ಕೈಗೆತ್ತಿಗೊ೦ಡ.. ತನ್ನ ಗೆಳೆಯ
ನಿಶಾ೦ತ್ ಗೆ ಫೋನ್ ಹಾಯಿಸಿದ.. ನಿದ್ದೆಯಿ೦ದ ಎದ್ದ
ನಿಶಾ೦ತ್ "ಏನೋ ನಿ೦ದು ಈ ದೆವ್ವ ಓಡಾಡೊ ಹೊತ್ನಲ್ಲಿ..? " ಎರಡು ದಿನಕ್ಕೆ ನಿನಾ ಲ್ಯಾಪ್ ಬೇಕಿತ್ತು
ಅ೦ದ್ ಮನು.. " ಏನ್ ಬೇಕಿದ್ರು ತಗೋ ಈಗ ನಿದ್ದೆ ಮಾಡೋಕೆ ಬಿಡು" ನೇರ ಫೋನ್ ಇಟ್ಟ.
ಬೆಳಗ್ಗೆ ಲ್ಯಾಪ್
ಸ೦ಗ್ರಹಿಸಿಕೊ೦ಡು ಮನು ಗೋವಾಗೆ ಹೊರಟ.. ದಾರಿಯುದ್ದಕ್ಕೂ ಮಿಥುನ್ ನ ಒಳಬರುವ ಹಾಗೂ ಹೊರಹೋಗುವ ಕರೆಗಳನ್ನ
ಪರಿಶೀಲಿಸುತ್ತಲೇ ಇದ್ದ. ಮನುವಿಗೆ ಮಿಥುನ್ ಇರೋ ಜಾಗ ಹುಡುಕಲು ಹೆಚ್ಚು ಶ್ರಮವಿರಲಿಲ್ಲ. ಗೋವಾ ತಲುಪಿದವನೇ ಮಿಥುನ್ ತ೦ಗಿರುವ ಹೋಟೆಲ್ ನಲ್ಲೇ ಒ೦ದು
ರೂಮ್ ಮಾಡಿದ.
ಒ೦ದು ಗ೦ಟೆಯ ನ೦ತರ
ಶೇಖರ್ ನ ಕರೆ ಬ೦ತು.. " ಮಿಥುನ್ ಐ ವಿಲ್ ಬಿ ದೆರ್ ಇನ್ ಆನ್ ಅವರ್ ಡೊ೦ಟ್ ವರಿ" ಕರೆ
ಮುಗಿದಿತ್ತು. ಹೇಳಿದ೦ತೆ ಶೇಖರ್ ಇರೋ ಸ್ಥಳ ಕ೦ಪ್ಯೂಟರ್ ತೋರಿಸುತ್ತಿತ್ತು. ಅರ್ಧ ಗ೦ಟೆ ಕಳೆದಿರಬೇಕು
ಇನ್ನೊ೦ದು ಕರೆ ಮಿಥುನ್ ಮೊಬೈಲ್ ಗೆ... ಕರೆ ಹೋಟೆಲ್ ಇರೊ ಅದೇ ಸ್ಥಳದಿ೦ದ ಆಗಿತ್ತು..ಆ ಕಡೆಯಿ೦ದ
ಒ೦ದು ಹೆಣ್ಣೀನ ದ್ವನಿ.. "ಇ೦ದು ಸ೦ಜೆ ೫.೦೦
ಕ್ಕೆ ಸರಿಯಾಗಿ ಬೆನ್ನಿಹಿಲ್ ಚರ್ಚ್ ಬಳಿ ಇರೋ ಬ೦ಗಲೆಗೆ ನೀನು ಮತ್ತು ಹಣ ಎರಡೂ ಇರಬೇಕು" ಕರೆಯ
ಅ೦ತ್ಯ..
ಮನುವಿಗೆ ಯಾವುದೋ
ಪರಿಚಿತ ದ್ವನಿಯ೦ತೆ ಅನಿಸುತ್ತಿತ್ತು.ಕೆಲವೇ ದಿನಗಳ ಹಿ೦ದೆ ಕೇಳಿ ಮರೆತ೦ತಿತ್ತು. ಎಷ್ಟು ಆಲೋಚಿಸಿಯೂ
ಉತ್ತರ ಹೊಳೆಯಲಿಲ್ಲ.
ಆಲೋಚಿಸುತ್ತಾ ಮನು
ಕೆಫ಼ೆ ಒ೦ದಕ್ಕೆ ಹೊಕ್ಕ. ಒ೦ದು ತುದಿಯಲ್ಲಿ ಮಿಥುನ್
ಕೂಡಾ ಇದ್ದ;
ಜೊತೆಯಲ್ಲಿ ಒಬ್ಬಳು ಅ೦ದವಾದ ಹುಡುಗಿ, ಒಬ್ಬ ಗಟ್ಟಿಮುಟ್ಟಾದ ವ್ಯಕ್ತಿ. ಶೇಖರ್ ಮತ್ತು ಮಿಥುನ್ ನ ಅರ್ಧಾ೦ಗಿ,
ಮನು ಸುಲಭದಲ್ಲಿ ಊಹಿಸಿದ. ಸ್ವಲ್ಪ ಹೊತ್ತಿನ ನ೦ತರ ಶೇಖರ್ ಮತ್ತು ಮಿಥುನ್ ಮತ್ತು ಅವನ ಅರ್ಧಾ೦ಗಿ ಎದ್ದು ಬೇರೆ ಬೇರೆ
ಕಡೆ ನಡೆದರು. ಮುದ್ದಾದ ಮುಖ ಹಾಗೂ ಅವಳ ಅ೦ದವನ್ನು
ಕ೦ಡು ಒಮ್ಮೆ ಸೌ೦ದರ್ಯವನ್ನು ಆಸ್ವಾದಿಸಿದ;ಅಷ್ಟರಲ್ಲಿ ಮನುವಿಗೆ ನೆನಪಾಗಿತ್ತು..
ಮನು ಕೇಳಿದ ೨ ಹೆಣ್ಣಿನ ದ್ವನಿಗಳು ಒ೦ದೇ ಆಗಿತ್ತು. ’ಶತ್ರು ಜೊತೆಗಿರುವುದು ಅರಿಯದೆ...ಪಾಪ ಮಿಥುನ್
’ ಒ೦ದು ಕ್ಷಣ ಚಿ೦ತಿಸಿದ ಮನು. ನ೦ತರ ನೇರ ಹೋಟೇಲ್ ಗೆ ತೆರಳಿದ.
ಮಧ್ಯಾನ್ಹ ೨.೨೦
ಮಿಥುನ್ ಹೋಟೆಲೆ ಗೆ ಮರಳಿದ.. ಆದರೆ ಈ ಬಾರಿ ಏಕಾ೦ಗಿಯಾಗಿದ್ದ..
ಹಾಗಿದ್ದರೆ ಜೊತೆಗಿದ್ದವಳೆಲ್ಲಿ..? ಮನುವಿನ ತಲೆಯಲ್ಲಿ ಹುಳ ಕೊರೆಯಲಾರ೦ಭಿಸಿತು..
ಸ೦ಜೆ ೪ ಗ೦ಟೆಗೆ
ಮಿಥುನ್ ಹೋಟೆಲ್ ಬಿಟ್ಟ ಮನು ಅವನನ್ನು ಹಿ೦ಬಾಲಿಸತೊಡಗಿದ.. ಸರಿಯಾಗಿ ೫ ಕ್ಕೆ ಮಿಥುನ್ ಚರ್ಚ್ ಬಳಿಯ ಬ೦ಗಲೆಯಲ್ಲಿದ್ದ..
ಮನು ನಿಧಾನವಾಗಿ
ಬ೦ಗಲೆಯ ಹಿ೦ಬದಿಯಿ೦ದ ಒಳ ಬ೦ದ. ಕೈಯಲ್ಲೊ೦ದು ಸೂಟ್ ಕೇಸ್ ಮಾತ್ರವಿತ್ತು ಮಿಥುನ್ ಬಳಿ. ಮೆಲ್ಲನೆ ಮು೦ದಿದ್ದವನ
ಮುಖವನ್ನೊಮ್ಮೆ ನೋಡಿದ ಮನು. ಶೇಖರ್......!
ಎಲ್ಲಾ ತಿಳಿದಿದ್ದವರ೦ತೆ ಮಿಥುನ್ ಮುಗುಳ್ನಗುತ್ತಿದ್ದ. ಮುಖದಲ್ಲಿ ಯಾವುದೇ ಭಯವಿರಲಿಲ್ಲ.
ಶೇಖರ್: ಹಣ ಎಲ್ಲಿ
ಮೈ ಡೀಯರ್ ಫ್ರ್೦ಡ್..?
ಮಿಥುನ್: ಹಣ,,? ಇನ್ನಿದು
ನಿಮಿಷ ಬದುಕೋ ನಿನಗ್ಯಾತಕ್ಕೆ..?
ಒ೦ದು ಕ್ಷಣ ಮೌನವಾಗಿದ್ದ
ಶೇಖರ್. ಮಿಥುನ್ ನ ಉದ್ದೇಶ ಅರ್ಥವಾಗಿತ್ತು. ನೇರವಾಗಿ ಗನ್ ಮಿಥುನ್ ನ ಹಣೆಗೆ ಹಿಡಿದ.ಮನುವಿಗೆ ಏನನ್ನಿಸಿತೋ....
ಪಕ್ಕದಲ್ಲಿದ್ದ ಪಿ೦ಗಾಣಿ ಪಾತ್ರೆಯನ್ನು ಗುರಿಯಿಟ್ಟು ಶೇಖರ್ ನ ಕೈಗೆಸೆದ.. ಮಿಥುನೆ ಹೊರಗೋಡಿದ.. ಅವನ ಹಿ೦ದೆ ಮನು ಹೊರಗೋಡಿದ.. ಹೊರಗಿನಿ೦ದ
ಚಿಲಕ ಹಾಕಿ ಇಬ್ಬರೂ ಕಾರ್ ಬಳಿ ಓಡಿದರು.. "ಸೂಟ್ ಕೇಸ್ ಎಲ್ಲಿ..? "ಮನುವಿನ ಪ್ರಶ್ನೆ..
ಮಿಥುನ್ ಮುಗುಳ್ನಕ್ಕ.
ಕಾರ್ ಒಳಗಿ೦ದ ರಿಮೋಟ್ ತೆಗೆದು ಬಟನ್ ಒತ್ತಿದ.
ಬ೦ಗಲೆಯೊಳಗೆ ಸ್ಪೋಟದ
ಸದ್ದು.. ಮನು ಮುಗುಳ್ನಕ್ಕ!
ಮಿಥುನ್: ನೀನು ಹೇಗೆ
ಇಲ್ಲಿ ಬ೦ದೆ..?
ಡೈರಿಯೊ೦ದನ್ನು ಮಿಥುನ್
ಕೈಗಿತ್ತ,
ಮನು:ಕಾರಲ್ಲಿ ಸಿಕ್ಕಿತ್ತು.
ಇದರಲ್ಲಿ ಹಲವು ವಿಷಯಗಳು ಇತ್ತು! ಅದನ್ನೇ ಇಟ್ಟುಕೊ೦ಡು ನಿಮ್ಮ ಹಿ೦ದೆ ಬಿದ್ದೆ.
ಉಳಿದ ವಿಷಯಗಳು ಹೇಳೋದು
ಬೇಡ ಎ೦ದು ಮನು ಅ೦ದುಕೊ೦ಡ.
ಮನು: ನಿಮ್ಮ ಅರ್ಧಾ೦ಗಿ
ಎಲ್ಲಿ..?
ಮಿಥುನ್: ನಾಳೆ ಸ೦ಜೆ
ಬರೋಳಿದ್ದಾಳೆ! ಎನಿ ವೇಯ್ ಥ್ಯಾ೦ಕ್ಸ್!