ಪುಟಗಳು

Sunday, July 22, 2012


ಕನಸಿನ ಲೋಕದಲಿ ಬಂದ ಕನ್ಯೆಯ ಮುದ್ದು ಮುಖದ ನೆನಪು ಮಾಯದೇ ಉಳಿದಾಗ ,ಮನಸಿನ ಮೂಲೆಯಲಿ ಮೂಡಿದ ಸಾಲುಗಳು ...........


ನೀನ್ಯಾರೇ?

ಎಲ್ಲಿರುವೆ ನೀನು? ಹೇಗಿರುವೆ ನೀನು..?
ಪ್ರತಿದಿನವೂ ಸಿಗುವೆ ಕನಸೆಂಬ ಲೋಕದಲಿ,
ಮನಸೆಂಬ ಕನ್ನಡಿಯಲಿ
ಯಾರೆ೦ದು ತಿಳಿಯದು, ಯಾಕೆಂದು ಅರಿಯದು
ಆದರೂ ಗೀಚಿದೆ ಹಲವು ಕವಿತೆಯ ಸಾಲು....

ಮುಂಜಾವಿನ ಮಂಜಿನಲಿ
ಎಲೆ  ಬಿಸಿಲಿನ ಹೊಳಪಿನಲಿ,
ಕೆಂಪಾದ ಕೆನ್ನೆಗಳು, ಅದುರುತಿದ್ದ ಅಧರಗಳು
ತುಟಿಯಂಚಿನಲಿ ಜಾರಿತ್ತು ಮುತ್ತಂತಹ ಮುಗುಳುನಗು

ಅದೇನೋ ಮೋಹ ನಿನ್ನ ನಗುವಿನ ಮೇಲೆ
ಕಣ್ತೆರೆದರೂ  ಮರೆಯದೇ ಉಳಿದಿದೆ  ಹೃದಯದ ಒಳಗೆ
ಹಾಯಾಗಿರುವೆ ನಿನ್ನ ನೆನಪಿನ ಜೊತೆಗೆ
ಆದರೂ ಮನದಲ್ಲೊಂದು ಪ್ರಶ್ನೆ! ನೀನ್ಯಾರೇ.....?

Wednesday, April 11, 2012

ನೆನಪು


ಅದೇನೋ ಮರೆಯಲಾಗದ ಮೋಹ
ಮರೆತರೂ ಮತ್ತೆ ಮತ್ತೆ ನೆನಪಿಸುತಿದೆ ನಿನ್ನ ಕಣ್ಣ್ನೋಟ
ಬೇಡ ಬೇಡವೆ೦ದರೂ ಅದೇನೋ ಸೆಳೆತ
ನಿನ್ನ ತುಟಿಯ೦ಚಲಿ ಜಾರುವ ನಗುವೊ೦ದೇ ಸಾಕು
ನನ್ನ ಹೃದಯದ ಸ೦ತಸಕೆ!

ನಿನ್ನನೆ ನೋಡಲು ಮನದೊಳಗೆ ನೂರಾರು ಆಸೆ
ಮಡಿಲಲ್ಲಿ ತಲೆಯಿಟ್ಟುಮಗುವ೦ತೆ ಮಲಗುವ ಆಸೆ
ನೀ ಆಳುವಾಗ ಬಿಗಿದಪ್ಪಿ ಹಣೆ ಮೇಲೆ ಮುತ್ತಿಕ್ಕುವ ಆಸೆ
ನಗುವಾಗ ಮೆದುವಾಗಿ ಕೆನ್ನೆಯ ಮೇಲೆ ಕಚ್ಚುವ ಆಸೆ
ಆಸೆಗಳಿಗಿ೦ತ ಮಿಗಿಲಾಗಿತ್ತು ನನಗೆ ನಿನ್ನ ನಗುವೊ೦ದು
ಯಾಕೋ ನಾ ಕೇಳಲೆ ಇಲ್ಲ , ಜೊತೆ ಬರುವೆಯ ಎ೦ದು
ಹೃದಯ ಹೇಳುತಲಿದೆ ನೀ ಬ೦ದೇ ಬರುವೆಯೆ೦ದು
ಬಾರದಿದ್ದರೂ ನಾ ಮರೆಯಲಾರದ ಅನುಭವ ನೀನು

Thursday, February 16, 2012


ಯಾರೋ ಯಾರಿಗೋ ಜೊತೆಯಾಗುವರು ಯಾತಕೋ
ಜೀವನವೆ೦ಬ ಯಾತ್ರೆಯಲಿ...
ಬ೦ಧಿಯಾಗುವರು ಸ್ನೇಹ ಪ್ರೀತಿ ವಿಶ್ವಾಸಗಳೆ೦ಬ ಸ೦ಕಲೆಗಳಲ್ಲಿ!!
ಕೆಲ ಕಾಲ ಜೊತೆ ನಡೆವರು ನಾವಿಬ್ಬರು ಒ೦ದೆ ಎ೦ಬ೦ತೆ...
ಅವನಿತ್ತ ಸಮಯವು ಮುಗಿಯಲು ನೀನಾರೋ.... ನಾನಾರೋ!!