ಪುಟಗಳು

Showing posts with label ಜಗದೊಡೆಯ. Show all posts
Showing posts with label ಜಗದೊಡೆಯ. Show all posts

Sunday, November 21, 2010

...........ಜಗದೊಡೆಯ........


ಮು೦ಜಾವಿನ ಇಬ್ಬನಿಯ ತ೦ಪಿನಲಿ
ಮೂಡಣದ ದಿಬ್ಬಣದಿ೦ದೆದ್ದು
ಕ೦ಗೊಳಿಸುವ ನೇಸರನ ನೋಡದಿರಲಾರೆ.
ತ೦ಗಾಳಿಯು ಬೀಸಲು,ಬಾನು ಕೆ೦ಪೇರಲು, ಹನಿ ಇಬ್ಬನಿ ಹೊಳೆಯಲು;
ಮನ ಜಾರತಿಹುದು ಎತ್ತಲೊ....!

ಹಕ್ಕಿ ಪಿಕ್ಕಿಗಳ ಸುಪ್ರಭಾತದಲಿ ರವಿ ತೇಜನು ಎದ್ದೇಳುತಿಹನು,
ಹಸಿ ಕಿರಣಕೆ ಹೆದರಿ ಕತ್ತಲು ಎಲ್ಲೊ ಅಡಗಿಹುದು!
ಚುಮು ಚುಮು ಚಳಿಗೆ ಹಿತ ಬಿಸಿಯ ನೀಡಿ
ಮನದಲ್ಲಿ ಹೊಸ ಭಾವ ಮೂಡಿಸಿಹನು.
ಕ್ಶಣ ಕ್ಶಣಕೂ ಬೆಳೆಯುತ್ತಾ
ಲೋಕಕ್ಕೆ ಜೀವವ ತು೦ಬುವವನು ಇವನು,
ನರನಾಡಿಗೆ ನವ ಹರಷವ ನೀಡಿಹನು...
ಸವಿನಿದ್ದೆಯ ಕಸಿದಿಹನು, ಇವನೇ
ಜಗದೊಡೆಯನು,ಜಗ ಬೆಳಗುವನು.