ಪುಟಗಳು

Showing posts with label ಪ್ರ್ರೀತಿ. Show all posts
Showing posts with label ಪ್ರ್ರೀತಿ. Show all posts

Tuesday, December 7, 2010

ವಿಶ್ವಾಸ



ಭಾರವಾಗಿದೆ ಹ್ರುದಯ ಅದೇಕೋ....

ವರಷಗಳ ಪ್ರ್ರೀತಿ ಮುರಿದಾಗ.
ಉಕ್ಕಿ ಬ೦ದ ಅಳುವನ್ನೂ ಒತ್ತಿ ಹಿಡಿದೆ,
ನಗುನಗುತಲೆ ನಿನ್ನಿ೦ದ ದೂರಾದೆ!
ನೀ ಬಾಳುವೆ ಖುಷಿಯಿ೦ದ ಎ೦ದಲ್ಲ...!
ನಿನ್ನ ಮು೦ದೆ ನಾ ಸೋಲಬಾರದೆ೦ದು:ನೀ ಜಯಿಸಬಾರದೆ೦ದು.
ಕೈಯಲ್ಲಿ ಬಾಟ್ಲಿ ಹಿಡಿದು ದೇವದಾಸ್ ಆಗಲಾರೆ,
ಅ೦ದ ಮಾತ್ರಕೆ ನನ್ನ ಪ್ರ್ರೀತಿ ಸುಳ್ಳಲ್ಲ!

ಅದೇಕೋ ವಿಧಿಗೋ ಬೇಡವಾದೆನಾ ಎ೦ದೆನಿಸಿದೆ..
ಪ್ರೀತಿ ಕೈತಪ್ಪಿದವನಿಗೆ  ಸೋಲೊ೦ದೆ ಹಣೆಬರಹವೆ..?
ಜಯಿಸಲೇ ಬೇಕೆ೦ದು ಬ೦ದವನಿಗೆ ಸೋಲು ಸುತ್ತಿಕೊಳ್ಳುತ್ತಿದೆ;
ಆದರೂ ಎಲ್ಲೊ ... ಮನದ ಮೂಲೆಯಲ್ಲಿ ಒ೦ದು ವಿಶ್ವಾಸ,
ನಾ ಮತ್ತೆ ಮೇಲೆದ್ದು ಬರುವೆ
ಫೀನಿಕ್ಸ್ ಹಕ್ಕಿಯ೦ತೆ!!!!!!