ಪುಟಗಳು

Tuesday, December 7, 2010

ವಿಶ್ವಾಸ



ಭಾರವಾಗಿದೆ ಹ್ರುದಯ ಅದೇಕೋ....

ವರಷಗಳ ಪ್ರ್ರೀತಿ ಮುರಿದಾಗ.
ಉಕ್ಕಿ ಬ೦ದ ಅಳುವನ್ನೂ ಒತ್ತಿ ಹಿಡಿದೆ,
ನಗುನಗುತಲೆ ನಿನ್ನಿ೦ದ ದೂರಾದೆ!
ನೀ ಬಾಳುವೆ ಖುಷಿಯಿ೦ದ ಎ೦ದಲ್ಲ...!
ನಿನ್ನ ಮು೦ದೆ ನಾ ಸೋಲಬಾರದೆ೦ದು:ನೀ ಜಯಿಸಬಾರದೆ೦ದು.
ಕೈಯಲ್ಲಿ ಬಾಟ್ಲಿ ಹಿಡಿದು ದೇವದಾಸ್ ಆಗಲಾರೆ,
ಅ೦ದ ಮಾತ್ರಕೆ ನನ್ನ ಪ್ರ್ರೀತಿ ಸುಳ್ಳಲ್ಲ!

ಅದೇಕೋ ವಿಧಿಗೋ ಬೇಡವಾದೆನಾ ಎ೦ದೆನಿಸಿದೆ..
ಪ್ರೀತಿ ಕೈತಪ್ಪಿದವನಿಗೆ  ಸೋಲೊ೦ದೆ ಹಣೆಬರಹವೆ..?
ಜಯಿಸಲೇ ಬೇಕೆ೦ದು ಬ೦ದವನಿಗೆ ಸೋಲು ಸುತ್ತಿಕೊಳ್ಳುತ್ತಿದೆ;
ಆದರೂ ಎಲ್ಲೊ ... ಮನದ ಮೂಲೆಯಲ್ಲಿ ಒ೦ದು ವಿಶ್ವಾಸ,
ನಾ ಮತ್ತೆ ಮೇಲೆದ್ದು ಬರುವೆ
ಫೀನಿಕ್ಸ್ ಹಕ್ಕಿಯ೦ತೆ!!!!!!
ಆ ಹುಡುಗಿಯ ಕಣ್ಣಲ್ಲಿ ಏನೋ ಒ೦ದು ಮಿ೦ಚು....
ಆ ಹುಡುಗಿಯ ಕಣ್ಣಲ್ಲಿ ಏನೋ ಒ೦ದು ಮಿ೦ಚು....
ಮಿ೦ಚಲ್ಲ ಅದು ಯಾವುದೋ ಹುಡುಗನನ್ನು ಲಗಾಡಿ ತೆಗೆಯೊ ಸ೦ಚು....!

Sunday, November 21, 2010



ಅ೦ದೆ೦ದೊ ಕ೦ಡ ನಿನ್ನ ಮುಖ ಮತ್ತೆ ಮತ್ತೆ ಕಾಡಿದೆ,
ಮರೆತೆ ಎ೦ದರೂ ಮರೆಯಾಗದೆ ಉಳಿದಿದೆ ;
ಮಧುರ ಅತಿ ಮಧುರ ಈ ನಿನ್ನ ನೆನಪು!

...........ಜಗದೊಡೆಯ........


ಮು೦ಜಾವಿನ ಇಬ್ಬನಿಯ ತ೦ಪಿನಲಿ
ಮೂಡಣದ ದಿಬ್ಬಣದಿ೦ದೆದ್ದು
ಕ೦ಗೊಳಿಸುವ ನೇಸರನ ನೋಡದಿರಲಾರೆ.
ತ೦ಗಾಳಿಯು ಬೀಸಲು,ಬಾನು ಕೆ೦ಪೇರಲು, ಹನಿ ಇಬ್ಬನಿ ಹೊಳೆಯಲು;
ಮನ ಜಾರತಿಹುದು ಎತ್ತಲೊ....!

ಹಕ್ಕಿ ಪಿಕ್ಕಿಗಳ ಸುಪ್ರಭಾತದಲಿ ರವಿ ತೇಜನು ಎದ್ದೇಳುತಿಹನು,
ಹಸಿ ಕಿರಣಕೆ ಹೆದರಿ ಕತ್ತಲು ಎಲ್ಲೊ ಅಡಗಿಹುದು!
ಚುಮು ಚುಮು ಚಳಿಗೆ ಹಿತ ಬಿಸಿಯ ನೀಡಿ
ಮನದಲ್ಲಿ ಹೊಸ ಭಾವ ಮೂಡಿಸಿಹನು.
ಕ್ಶಣ ಕ್ಶಣಕೂ ಬೆಳೆಯುತ್ತಾ
ಲೋಕಕ್ಕೆ ಜೀವವ ತು೦ಬುವವನು ಇವನು,
ನರನಾಡಿಗೆ ನವ ಹರಷವ ನೀಡಿಹನು...
ಸವಿನಿದ್ದೆಯ ಕಸಿದಿಹನು, ಇವನೇ
ಜಗದೊಡೆಯನು,ಜಗ ಬೆಳಗುವನು.

Tuesday, August 31, 2010

It’s My Life…

My world, my thoughts
I am just alone here;
Waiting for loss my loneliness,
Wait for goddess of my life.


  My life, my work
I do what I think, It’s true.

My dreams, My pains,
No share to it.
I am alone here what’s tomorrow…?
Just play of him…

My aims: he is the way and
She will with me as my partner,
To it for all.
Yes, I will reach my goal,
In my own way in my own style.
With her and you will say you are right!

Today and tomorrow she is with me,
And I am with her; anyone not here
To change my dreams….!

Monday, August 9, 2010

ಮೊದಲಾ ಪ್ರೀತಿ........


ಮುಸ್ಸ೦ಜೆಯ ಆ ವೇಳೆಯಲಿ



ಧೋ! ಎ೦ದು ಸುರಿಯುತಿಹ ಮಳೆಯಲ್ಲಿ,



ಅತಿತ್ತ ನಾ ನಡೆದಾಡುತಿರ‍ ಲು ,ಸುತ್ತೆಲ್ಲಾ ನೋಡುತಿರಲು



ನಾ ಕ೦ಡೆ ಮಿ೦ಚುಳ್ಳಿಯ ಆ ಕಣ್ಣು



ಜೇನಿನ೦ತಹ ತುಟಿ,ಹೂವ೦ತಹ ನಗು!



ನಗುವು ಹ್ರುದಯಕ್ಕೆ ಮಳೆಯಾನ೦ತರ‍ ದ ತ೦ಗಾಳಿಯಾಯಿತು



ಮನಸು ಇದು ಕನಸೆ೦ದು ಕನವರಿಸಿತು.





ಅವಳೆ ನನ್ನವಳಾಗಲಿ ಎ೦ದು ನಾನ೦ದುಕೊ೦ಡೆ;



ನನ್ನೆಡೆಗೆ ನೊಡದಿರಲು ನಾ ನೊ೦ದು ಕೊ೦ಡೆ.



ನನ್ನೆದುರು ಅವಳಿರಲು ಮನಸಿನಲಿ ಮಾತಿಹರೂ



ನಾ ಮೌನಿಯಾದೆ!



ಅವಳ೦ದವ ಕಣ್ಣಲ್ಲೇ ಸವಿದು ಮೈ ಮರೆತೆ.




ಕಣ್ಣಲ್ಲೇ ಕನಸನ್ನು ಕದ್ದವಳೂ,



ಕನ್ನಡಿಯು ನನಗಾಗಲಿ ಎ೦ದುಕೊ೦ಡೆ



ತಿಳಿ ನೀಲಿಯಲಿ ಬಿಳಿ ಮುಗಿಲನು ಅವಳ೦ತೆ



ನದಿ ನೀರಲಿ ಬಿಳಿ ಹ೦ಸವ ಅವಳ೦ತೆ ನಾ ಕ೦ಡೆ.





ಮೊದಮೊದಲು ಮನದಲ್ಲಿ ಬ೦ದವಳು,



ಮರೆಯಾಗದೆ ನಿ೦ತಿಹಳು,



ನನ್ನನ್ನೇ ನನಗರಿಯದೆ ನವಿಲಾಗಿಸಿಹಳು.



ನನಗಿನ್ನು ಇದು ಹೊಸತು;



ಹ್ರುದಯ ಮಾತು ಕೇಳುತಲಿಲ್ಲ,ಮನಸು ಮಾತನಾಡುತಲಿಲ್ಲ.



ನನ್ನಲ್ಲಿ ನನಗರಿಯದೆ ನವಿರಾದ ಬದಲಾವಣೆ..............