ಹೊರಗೆ ಎಷ್ಟೇ ನಗುತಿದ್ದರೂ, ನನ್ನೊಳಗಿನ ಅಳುವನ್ನು ಯಾರೊ೦ದಿಗೆ ಹ೦ಚಿಕೊಳ್ಳಲ್ಲಿ,ಅದೆಷ್ಟು ದಿನ ಆ ನೋವನ್ನು ನನ್ನಲ್ಲಿಡಲಿ? ದಿನ ಕಳೆದ೦ತೆ ಮತ್ತೊ೦ದಷ್ಟು ಅದಕ್ಕೆ ಸೇರುತ್ತೆ....! ಒ೦ದಲ್ಲಾ ಒ೦ದು ದಿನ ಮನಸೇ ಒಡೆದು ಚೂರು ಚೂರಾದರೆ ಎ೦ದೆನಿಸುತ್ತೆ., ನಾನೇನು ಸಹಾಯ ಅನುಕ೦ಪವನ್ನು ಯಾರಿ೦ದಲೂ ಬಯಸುತ್ತಿಲ್ಲ;ಅದರ ಅಗತ್ಯವೂ ನನಗಿಲ್ಲ; ಆದರೆ ದು:ಖದಲ್ಲಿರುವಾಗ ಎರಡೆ ಎರಡು ಸಮಾಧಾನದ ಮಾತು ;ಖುಷಿಯಲ್ಲಿರೋವಾಗ ಜೊತೆಯಲ್ಲಿ ಹೆಗಲಲ್ಲಿ ಕೈಯಿರಿಸಿ ಕೆಲವೆ ಕೆಲವು ಎಚ್ಚರಿಕೆಯ ಮಾತುಗಳು;ಸೋಲ ಸುಳಿಯಲ್ಲಿರುವಾಗ ವಿಶ್ವಾಸದ ಮಾತು,ಅಷ್ಟೇ ಸಾಕು!
ನನ್ನ ಮನದಾಳಕ್ಕೆ ಇಳಿಯೋದು ಅಷ್ಟು ಸುಲಭದ ಮಾತಲ್ಲ ,ಯಾರಿಗೂ ... ನನಗೂ ಕೂಡಾ! ಅದರ ಹಿ೦ದಿನ ಇತಿಹಾಸ ಅದೊ೦ದಕ್ಕೆ ಗೊತ್ತು.!!
ನನ್ನೀ ಮನದೊಳಗಿನ ಮಾತುಗಳನ್ನು ಎಲ್ಲರಲ್ಲೂ ತೆರೆದಿಡಲಾರೆ,ಏಕ೦ಗಿ ಬಾಳು ಸಾಕಗಿದೆ.... ಗೆಳೆಯ /ಗೆಳತಿ /ಸ೦ಗಾತಿ ಯಾರಾದರೂ ಸರಿ ಜೊತೆ ಬೇಕಾಗಿದೆ.ಏತಕೊ ದಿನಕಳೆದ೦ತೆ ಅದು ಬಲವಾಗಿದೆ.ನಾ ಜೀವಕ್ಕಿ೦ತ ಹೆಚ್ಚು ಪ್ರೀತಿಸೋ ;ನನಗಾಗಿ ಬದುಕೋ ಜೀವವೊ೦ದು ಬೇಕೆನಿಸಿದೆ!.ಈ ಮನಸನ್ನ ತಿಳಿಯೋ ಮನಸು ಎಲ್ಲಿಹುದೊ? ಅದು ಯಾರೋ? ಏನೊ.......? ನನ್ನ ನನಗಿ೦ತ ಚೆನ್ನಗಿ ತಿಳಿಯೊ, ನಾ ಅರ್ಥೈಸಿಕೊಳ್ಳಲು ಸಾದ್ಯವಿರುವ೦ತಹ ಆ ಮನಸ್ಸು ಯಾವುದೊ....?
ಅ೦ತಹ ಒ೦ದು ಜೀವ ಇಲ್ಲದೆ ಇರುವುದರಿ೦ದಲೇ ಏನೋ, ಉತ್ಸಾಹವೆ೦ಬ ಗಿಡ ಬಾಡಿ ಹೋದ೦ತೆ ಅನಿಸುತ್ತಿದೆ.ಏನೋ ಬೇಸರ.... ಕಾರಣವಿಲ್ಲದೆ........ ಪುನ: ಕಳೆ ಮೂಡಿಸೋ ತಣ್ಣೀರ ನಿರೀಕ್ಶೆಯಲ್ಲಿದೆ. ಕೆಲವೊಮ್ಮೆ ಬೀಸೋ ತ೦ಗಾಳಿಗೆ ಕಾಣೋ ಕಾರ್ಮುಗಿಲಿಗೆ ಮತ್ತೆ ಮತ್ತೆ ಚಿಗುರೋ ಆಸೆಗಳು. ಅದು ಯಾರೋ ಹತ್ತಿರವಾದ೦ತೆ ; ಮತ್ತೆ ಕೆಲವೆ ದಿನಗಳಲ್ಲಿ ದೂರ ಹೋದ೦ತೆ ಅನಿಸುತ್ತೆ. "God Decides Something" ಆದರೂ ಕಾಯುವುದು ಸಾಕಾಗಿದೆ.ನಿರೀಕ್ಶೆಯೊ೦ದೇ ಇಲ್ಲಿಯವರೆಗೆ ಜೊತೆಗಿತ್ತು.ನಿರೀಕ್ಶಿಸಿದಷ್ಟೂ ಮುಗಿಯದೆ ಇರೋದು ನಿರೀಕ್ಶೆಯೊ೦ದೆ!
ಹೊರ ನೋಡಿದರೆ ಕಾಣೋದು ಸ್ಪರ್ದಾ ಜಗತ್ತು,ಅಳು ಮುಖದಿ ಇಲ್ಲಿ ಎಲ್ಲಾನು ಎದುರಿಸೋಕಾಗುತ್ತಾ?ಹೇಗೊ, ಖುಷಿಯಿಲ್ಲದ ನಗುಮುಖದಿ ಈ ಪಯಣ ಸಾಗುತ್ತಿದೆ,ಅದರ ನಡು ನಡುವೆ ನಿನಗಾಗಿ ಹುಡುಕಾಟ.ಅದೇ ಆ ಕಲ್ಲು ಬೆ೦ಚಿನ ಮೇಲೆ ಕುಳಿತು,ತ೦ಗಾಳಿಗೆ ಮೈಯ್ಯೊಡ್ಡುತ್ತಾ ಕೂತಾಗ ನಿನ್ನ ನೆನೆಪು ಮತ್ತೆ ಮತ್ತೆ ನೆನಪಾಗುತ್ತೆ . ಮನಸು ಇನ್ಯಾವುದೋ ಲೋಕ ಸೇರುತ್ತೆ. ಕಣ್ಣ೦ಚಲಿ ಹನಿ ನೀರು ಜಿನುಗುತ್ತೆ...........!
ಮೌನ ದು:ಖವನ್ನು ತೋರಿಸಿದರೆ ಮಾತು ನಗುವನ್ನು ತೋರಿಸುತ್ತಿತ್ತು. ಏಕಾ೦ಗಿಯಾಗಿ ಕಳೆಯಬೇಕಾದ ದಿನಗಳು ನೆನಪಾಗುತ್ತಿತ್ತು.ಈಗಲೂ ಹುಡುಕಾಟ ಮು೦ದುವರಿದೆ ಇದೆ..............
ಬಹಳ ಚೆನ್ನಾಗಿದೆ ..ಒಳ್ಳೆ ಪ್ರಯತ್ನ...ಇನ್ನೂ ಮುಂದುವರಿಯಲಿ ...all the best...
ReplyDeleteಧನ್ಯವಾದಗಳು!
Delete