ಪುಟಗಳು

Friday, August 28, 2015

ಮಿಥ್ಯೆ


ಮಿಥ್ಯೆಯ ಕತ್ತಲಲ್ಲಿ ಸತ್ತು ಹೋಗದಿರಲಿ ಸತ್ಯ ಮುಖ
ಬದುಕು ಸವೆಸಬೇಕಾದೀತು ಪರದೆಯ ಹಿಂದೆ ಅಪರಿಚಿತನಂತೆ,
ಮನವು ಮಾಯೆಯ ವಶವಾದಂತೆ.
ತಿಳಿದಿದ್ದೂ ಒಂದಿಷ್ಟು ಭಯ
ಎಲ್ಲಿ ಬೆಳಕಿನೆದುರು ಬೆತ್ತಲಾಗುವೆನೆಂದು
ಭುವಿಗೆ ಇಳಿದಾಗಲೇ ಜೊತೆಗಿದ್ದ ವಕ್ರತೆಗಳ ತೆರೆದು.
ಆದರೆ,ಕತ್ತಲಲೇ ಕಳೆಯುವುದು ಎಷ್ಟು ದಿನ?
ನಡೆಯುತಿಹೆ ದೂರದಿ ಮಿನುಗುವ ಬೆಳಕಿನ ಮೂಲ ಹುಡುಕಿ
ಇಷ್ಟೇ ಪ್ರಾರ್ಥನೆ ಆಗದಿರಲಿ ಇದೂ ಕೂಡಾ ಮೊದಲು ದೊರಕಿದ ಮರೀಚಿಕೆಯಂತೆ!

Wednesday, December 10, 2014

ಬದಲಾವಣೆಯ ಗಾಳಿ ಬೀಸುತಿದೆಯೇ ಬ್ಲಾಗ್ ಸಾಹಿತ್ಯ?


ಲಿಪಿಯ ಆವಿಷ್ಕಾರದಿಂದ ಹಿಡಿದು ಭಾಷೆಯು ಇಂದಿನ ಸ್ಥಿತಿ ತಲುಪುವ ವೇಳೆಗೆ ಹಲವಾರು ಮಾರ್ಪಾಟುಗಳನ್ನ ಹೊಂದಿದೆ. ಕೆಲವೆಡೆ ಮೂಲರೂಪವೇ ಬದಲಾಗಿ ಹೋಗಿದ್ದೂ ಇದೆ. ಹೊಸತು, ಪರಕೀಯ ಸ್ವರೂಪಗಳು ಸೇರಿಕೊಂಡಿದ್ದು ಇದೆ. ಬರವಣಿಗೆಯ ಮೂಲಕ ಪದಗಳನ್ನು ಚಿತ್ರಿಸುವ ಕಲೆ ನಂತರವಷ್ಟೆ ಬೆಳೆದು ಬಂದಿದ್ದು.  ಬರವಣಿಗೆಯ ಮೊದಲ ರೂಪ ನಮಗೆ ಸಿಗುವುದು ಪೂರ್ವಜರು ವಾಸಿಸಿದ್ದ ಗುಹೆಗಳಲ್ಲಿ. ಅವರು ಬಿಡಿಸಿದ್ದ ಸಂಕೇತಗಳ ಮೂಲಕ. ಹರಪ್ಪ, ಮೊಹೆಂಜದಾರೋಗಳಂತಹ ನಾಗರಿಕತೆಗಳಲ್ಲಿ.  ಮುಂದುವರೆಯುತ್ತಾ ಶಾಸನಗಳು, ತಾಳೆಗರಿಗಳು ಪುಸ್ತಕಗಳು ಎಂಬುದಾಗಿ ಕಾಲ ಬದಲಾಗುತ್ತಾ ಬಂತು. ಹಿಂದಿನಿಂದ ನೋಡಿದರೆ ಸಾಹಿತ್ಯ /ಕಾವ್ಯ ಎಂಬ ಪದ ಇನ್ನೂ ನವಯುವಕ ಎಂದು ಕರೆದರೆ ಬಹುಶ: ತಪ್ಪಾಗಲಾರದು.
 ಪ್ರಾರಂಭದಿಂದಲೂ ಯಾವುದೇ ಭಾಷೆಯ ಸಾಹಿತ್ಯಗಳು ನಿಂತ ನೀರಂತೆ ಒಂದೇ ರೀತಿಯಾಗಿ ಇದ್ದಿದ್ದು ಇಲ್ಲ. ಕಾಲ, ದೇಶ, ರಾಜಕೀಯ, ಧಾರ್ಮಿಕ ಹೀಗೆ ಹಲವಾರು ಪ್ರಭಾವಗಳಿಗೆ ಒಳಗಾಗಿ ರೂಪಾಂತರ ಹೊಂದುತ್ತಾ ಬಂದಿದೆ. ಬದಲಾವಣೆಗೆ ಒಗ್ಗದ ಭಾಷೆಗಳು ಜನರಿಂದ ದೂರವಾದದ್ದು ಕಾಣಬಹುದು.  ಹಾಗೆಯೇ  ಕಾಲಕ್ಕೆ ತಕ್ಕ ಕೋಲವನ್ನ ಹೊಂದಿದ ಭಾಷೆಗಳು ಇನ್ನೂ ಚಾಲ್ತಿಯಲ್ಲಿರುವುದು ಕಾಣುತ್ತೇವೆ. ಬದಲಾವಣೆಗೆ ಮೈಯೊಡ್ಡುತ್ತಿರು ಜಗತ್ತಿನ ಹಲವಾರು ಭಾಷೆಗಳಲ್ಲಿ ಯಾವುದು ಆಲದ ಮರದಂತೆ ವಿಶಾಲವಾಗಿ ಬೆಳೆಯುತ್ತದೆ? ಯಾವುದು ಪರಾವಲಂಬಿ ಸಸ್ಯಕ್ಕೆ ಜಾಗ ನೀಡಿದ ಮರದಂತೆ ಸೊರಗುತ್ತದೆ? ಎಂಬುದು ಕಾಲ ತೀರ್ಮಾನಿಸುತ್ತದೆ.
ಕಾಲಾಂತರಗಳಿಂದ ಹಲವಾರು ಕವಿಗಳು/ಲೇಖಕರು ಸಾಹಿತ್ಯ ರಚನೆ ಮಾಡುತ್ತಾ ಬಂದಿದ್ದಾರೆ.  ಶ್ರೇಷ್ಠವಾದುದನ್ನು ಜನರು ಸ್ವೀಕರಿಸಿದ್ದಾರೆ. ಉಳಿದವುಗಳು ಕಾಲಚಕ್ರದ ಉರುಳುವಿಕೆಯ ನಡುವೆ ಸುಳಿವಿಲ್ಲದಂತೆ ಕಳೆದುಹೋಗಿದೆ. ನಿತ್ಯಜೀವನದಲ್ಲಿ ತಂತ್ರಜ್ಞಾನವು ಹಾಸುಹೊಕ್ಕಿರುವ ಇಂದಿನ ದಿನಗಳಲ್ಲಿ ಸಾಹಿತ್ಯವೂ ತಂತ್ರಜ್ಞಾನದ ಜೊತೆಯೆ  ಹೊಂದಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಸಾಹಿತ್ಯವೆಂಬುದು ಜನರಿಂದ ದೂರವಾದರೂ ಆಶ್ಚರ್ಯವೇನಿಲ್ಲ. ಒಂದು ಕಾಲದಲ್ಲಿ ಲೇಖನಿ, ಮುದ್ರಣ ಯಂತ್ರಗಳು ಹೇಗೆ ಸಾಹಿತ್ಯದ ಪ್ರಚಾರಕ್ಕೆ ದಾರಿ ಮಾಡಿಕೊಟ್ಟಿತು. ಇಂದು ಸಾಮಾಜಿಕ ಜಾಲತಾಣಗಳು ಈ ಕೆಲಸ ಮಾಡುತ್ತಿವೆ ಎಂದೆನಿಸುತ್ತದೆ.  ಇವುಗಳು ಸಾಹಿತ್ಯವನ್ನು ಜನರಿಗೆ ತಲುಪಿಸಲು ಉತ್ತಮ ಮಾಧ್ಯಮವಾಗಿ ಪರಿವರ್ತಿತವಾಗುತ್ತಿದೆ. ಸಾಹಿತ್ಯದ ರೂಪ, ಗಾತ್ರ ಮುಂತಾದ ಬದಲಾವಣೆಗಳು ಇದ್ದರೂ ಹೊಸತೊಂದು ಟ್ರೆಂಡ್ ಉಂಟಾಗಿರುವುದು ಸುಳ್ಳಲ್ಲ. ಬ್ಲಾಗ್ ಸಾಹಿತ್ಯ ಎಂದು ಈಗಾಗಲೆ ಇದಕ್ಕೆ ನಾಮವೊಂದು ಜನಿಸಿಯಾಗಿದೆ.
ಇಲ್ಲಿ ತಮ್ಮ ಅನಿಸಿಕೆಗಳನ್ನೋ, ಬರವಣಿಗೆಯನ್ನೋ ಓದುಗನಿಗೆ ತಲುಪಿಸಲು ಇನ್ನೊಬ್ಬನ ಹಂಗಿಗೆ ಕಾಯ ಬೇಕಿಲ್ಲ. ಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸುತ್ತಾರೋ ಇಲ್ಲವೋ ಎಂದು ನಿರೀಕ್ಚೆ ಇಡಬೇಕಾಗಿಲ್ಲ. ವೇಗವಾಗಿ ಸಾಗುತ್ತಿರುವ ಜಗತ್ತಿನಲ್ಲಿ ನೇರವಾಗಿ ಓದುಗನನ್ನು ತಲುಪಲು  ಅತ್ಯಂತ ಸರಳ ದಾರಿ ಈ ಬ್ಲಾಗ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳು.  ಬರೆದಿದ್ದು ನಾಲ್ಕು ಸಾಲುಗಳಾದರು  ಅದರಲ್ಲೇ ಸುಲಭದರ್ಥವ ಹೇಳಿ ಮೆಚ್ಚುಗೆ ಗಳಿಸಬಹುದು. ನಾಲ್ಕು ಜನರ ನಡುವೆ ಬುದ್ದಿಜೀವಿಯಂತೆ ಫೋಸ್ ಕೂಡಾ ಕೊಡಬಹುದು. ನೇರವಾಗಿ ಹೇಳಲೆನಿಸಿದ್ದನ್ನು ಧೈರ್ಯವಾಗಿ ಬರೆಯಬಹುದು. ಯಾರ ಹಂಗಿಲ್ಲದೆ ಬರವಣಿಗೆಗೆ ಮುಕ್ತ ಅವಕಾಶ ಇಲ್ಲಿದೆ. ಯಾರು ಉತ್ತಮ ಎಂಬುದನ್ನು ನೇರವಾಗಿ ಓದುಗ ನಿರ್ಧರಿಸುತ್ತಾನೆ. 
ಇಲ್ಲಿ ಏನೇನೊ ಬರೆದು ಜನರನ್ನ ಮರುಳುಗೊಳಿಸುವುದು ಕಷ್ಟ. ಮುಕ್ತವಾಗಿ ಅಭಿಪ್ರಾಯ ಪ್ರಕಟಣೆ ಸಾಧ್ಯ. ಅಭಿಪ್ರಾಯದ ಹೇರಿಕೆ ಸಾಧ್ಯವಿಲ್ಲ. ತಾನು ಬರೆದಿದ್ದೇ ಮೇರು ಕೃತಿ ಎಂಬಂತೆ ಒಂದೆರಡು ಸಾಹಿತಿಗಳಿಂದ ಹೊಗಳಿಸಿಕೊಂಡು ನಡೆಯುವುದು ಕಷ್ಟಸಾಧ್ಯ. ಬುದ್ಧಿಜೀವಿಗಳಿಗೆ ಇದು ವಜ್ರ್ಯವಾಗುವುದು ಇಲ್ಲೆ. ತಮ್ಮ ಸಾಹಿತ್ಯಗಳು ಸಮಾಜದಿಂದ ನೇರವಾಗಿ ತಿರಸ್ಕರಿಸಲ್ಪಟ್ಟಾಗ ಕೆಲವರಿಗೆ ಸಹಿಸಲಸಾಧ್ಯವಾಗುವುದು ಸಹಜ. ಆಗಲೆ ಇವುಗಳಿಗೆ ವಿರೋಧ ಹುಟ್ಟಿಕೊಳ್ಳುವುದು. ಆದರೆ ಎಲ್ಲಾ ವಿಧದ ಅಭಿಪ್ರಾಯಗಳು  ಬ್ಲಾಗ್ ಸಾಹಿತ್ಯಗಳಿಗೆ ಅಂಟಿಕೊಂಡು ಚರ್ಚಿಸಲ್ಪಡುತ್ತಿದೆ ಎನ್ನುವುದು ವಿಷೇಷ.
ಹಾಗೆ ನೋಡಿದಲ್ಲಿ ಬ್ಲಾಗ್ ಸಾಹಿತಿಗಳಲ್ಲಿ ಎಲ್ಲಾ ವಿಧದವರೂ ಸಿಗುತ್ತಾರೆ, ತಮ್ಮ ಆತ್ಮಸಂತೋಷಕ್ಕೋಸ್ಕರ ಬರೆಯುವವರು,  ವ್ಯವಸ್ಥೆಯ ವಿರುದ್ಧ ದ್ವನಿಯೆತ್ತುವವರು, ಅನ್ಯಾಯವನ್ನು ವಿರೋಧಿಸುವವರು,  ಸೌಂದರ್ಯಾ, ವರ್uನೆಗಳಿಗೆ ಮಣೆ ಹಾಕುವವರು ಎಂಬಂತೆ ಎಲ್ಲಾ ಬರವಣಿಗೆಗೂ ಇಲ್ಲಿ ಮುಕ್ತ ಅವಕಾಶವಿದೆ.
 ಇದು ಒಂದೇ ತೆರನಾದ ಸಾಹಿತ್ಯದ ಏಕಾನತೆಗೆ ಬೇಸತ್ತು ಹೊಸ ಗಾಳಿಯ ಹುಡುಕುತ್ತಾ ಹೊರಟವರಿಗೆ ವೇದಿಕೆಯಾಗಿದ್ದು ಇರಬಹುದು.  ಇನ್ನು ಕೆಲವು ನೆಟ್ಟಿಗರ ಗುಂಪುಗಳು ಹಳೆಯ ಪಂಪ, ರನ್ನ, ಪೊನ್ನ ಮೊದಲಾದವರ ಕಾವ್ಯಗಳಿಗೆ ಹಿಂತಿರುಗಿ ಹೋಗಿ ಅವುಗಳ ಮೇಲೆ ಚರ್ಚೆಗಳಾನ್ನಾರಂಬಿಸಿ ಅದರ ಸತ್ವವನ್ನು ಕಡೆಯುವ ಕೆಲಸವೂ ನಡೆಯುತ್ತಿದೆ.  ಇಲ್ಲಿ ಸಾಮಾಜಿಕ ಚಿಂತನೆಗಳಿಗಿಂತ ಹೊರತಾಗಿರುವ ಬರಹಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ ಅಂಶ. ನವ್ಯ ನವೋದಯ, ಪ್ರಗತಿಶೀಲ, ಬಂಡಾಯ ಹೀಗೆ ಹಲವು ದಶಕಗಳ ಬೆಳವಣಿಗೆಗೆ ರೋಸಿ ಹೋಗಿ ತಮ್ಮದೇ ಖಾಸಗಿತನವನ್ನು ಈ ಹೊಸ ಬ್ಲಾಗ್ ಸಾಹಿತ್ಯಗಳು  ಕಂಡುಕೊಂಡಿರುವುದು ಸತ್ಯವಾಗಿದ್ದರೆ ಇನ್ನೊಂದು ರೀತಿಯ ಬದಲಾವಣೆಗೆ ಇದು ಮುನ್ನುಡಿಯಾಗಿರಲೂಬಹುದು.  ದಿಕ್ಕು ತಪ್ಪಿ ಹೋದ ಸಾಹಿತ್ಯದ ಅರಿವು ಇರುವ ವಿದ್ಯಾವಂತರೇ ಇಲ್ಲಿ ಮುಖ್ಯವಾಗಿ ಕಾಣಿಸುತ್ತಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ. ಕೆಲವು ಬ್ಲಾಗ್ ಸಾಹಿತಗಳನ್ನು ಮಾತನಾಡಿಸಿದರೆ ‘ಇಸಮ್’ ಗಳಿಗಿಂತ ಅದಕ್ಕಿಂತ ಹಿಂದಿನ ಸಾಹಿತ್ಯವೇ ಅವರಿಗೆ ಪ್ರಿಯವಾಗಿರುವುದು ತಿಳಿಯುತ್ತದೆ.
“ಇಲೆಕ್ಟ್ರಾನಿಕ್ ಯುಗದ ಪರಿಭಾಷೆಯಲ್ಲಿ  ಆಧುನಿಕ ಜಾನಪದ ಸಾಹಿತ್ಯ ಎಂದು ಪರಿಗಣಿಸಿದರೆ ತಪ್ಪಾಗಲಾರದು. ಆದರೆ ಇಲ್ಲಿ ಸಾಮಾಜಿಕ ಪ್ರಜ್ಞೆಯ ಕೊರತೆ ಕಾಣುತ್ತಿದೆ. ಈ ಸಾಹಿತಯಕ್ಕೆ ವ್ಯಕ್ತವಾಗುವ ಪ್ರತಿಸ್ಪಂದನೆ ಕೂಡಾ ಕೆಲವೇ ಶಬ್ದಗಳಿಗೆ ಸೀಮಿತವಾಗಿದೆ. ಹೀಗಾಗಿ ಇದನ್ನು ವಿಮಶೆಯ ವ್ಯಾಪ್ತಿಗೆ ತರಬೇಕಾದ ಅಗತ್ಯವಿದೆ” ಎಂಬುದು ಅರವಿಂದ ಮಾಲಗಿತ್ತಿಯವರು ಇತ್ತೀಚೆಗಷ್ಟೇ ಅಭಿಪ್ರಾಯಪಟ್ಟಿದ್ದಾರೆ.
ಈ ಬ್ಲಾಗ್ ಸಾಹಿತ್ಯದ ಪರ ವಿರೋಧ ಸಾಕಷ್ಟು ಚರ್ಚೆಗಳಾಗುತ್ತಿದೆ. ಆದರೆ ಒಂದು ಕಾಲದಲ್ಲಿ ಕಾವ್ಯ ರಚನೆಗೆ ಇದ್ದ ಕಠಿಣ ನಿಯಮಗಳನ್ನು ಕಿತ್ತೆಸೆದು ಸಾಹಿತ್ಯ ಎಂಬುದನ್ನ ಸರಳಗೊಳಿಸಿದೆವೋ ಅಂದೇ ಬ್ಲಾಗ್ ಸಾಹಿತ್ಯಗಳು ಬೇಡ, ಶಬ್ದಗಳು ಸೀಮಿತವಾಗಿದೆ, ಅವುಗಳು ಸಾಹಿತ್ಯವೇ ಅಲ್ಲ ಎನ್ನುವ, ಇನ್ನೊಂದು ಬಗೆಯ ಸಾಹಿತ್ಯವನ್ನು ವಿರೋಧಿಸುವ ಹಕ್ಕು ಕಳೆದುಕೊಂಡಿದ್ದೇವೆ ಎನ್ನುವುದು ನನ್ನ ಅಭಿಪ್ರಾಯ.  ಸಾಹಿತ್ಯದಲ್ಲಿ ಯಾರು ಏನೇ ಬದಲಾವಣೆ ಮಾಡಿದರೂ, ಜನ ಸ್ವೀಕರಿಸಿದರೆಂದರೆ ಯಾವೊಬ್ಬನೂ ಕೂಗಾಡಿ ಪ್ರಯೋಜನವಿಲ್ಲ ಎಂಬುದು ಕಟು ಸತ್ಯ. ಅದೇ ರೀತಿ ಕಾಲ ಕಾಲಕ್ಕೆ ಬದಲಾಗುತ್ತಾ ಬಂದ ಸಾಹಿತ್ಯವು ಮತ್ತೊಂದು ರೂಪವನ್ನು ಪಡೆದುಕೊಳ್ಳುವಾಗ ವಿಮರ್ಶಿಸುವುದು ಅನಗತ್ಯವಾಗುತ್ತದೆ. ಬದಲಾವಣೆ ಜಗದ ನಿಯಮ. ಹಿಂದಿನ ಬದಲಾವಣೆಯ ಕರ್ಮಗಳಿಗನುಸಾರವಾಗಿ ಮುಂದಿನ ಬೆಳವಣಿಗೆ ಮುಂದುವರೆಯುತ್ತದೆ. ಆದರೆ ಅದು ಎಲ್ಲಿ ಕೊನೆಯಾಗಬೇಕು? ಅಥವಾ ಹಿಂದಿರುಗಿ ಹಳಯ ಕಾಲಕ್ಕೆ ನಡೆಯಬೇಕೋ ಎಂಬುದು ಕಾಲಚಕ್ರ ಉರುಳಿದಂತೆ ತಿಳಿಯಾಗಬೇಕಷ್ಟೆ. 

Thursday, March 13, 2014

ವರುಷಗಳ ನೆನಪು

ವರುಷಗಳೇ ಕಳೆದರೂ ಹರುಷಗಳು ಸಾಲು ಸಾಲು
ಸಾಲದಾಗಿದೆ ಜೊತೆಯಾಗೋ ಸಾವಿರ ನೆನಪು
ಸವಿಯಾಗಿದೆ ಸರಿಯಾದ ಜ್ನಾನದ ಬೆಳಕು
ಬೇಕಾಗಿದೆ ಇನ್ನೊಂದಿಷ್ಟನು ಪಡೆಯಲು ಇನ್ನಷ್ಟು ಹುರುಪು

ಹೊಸ ಭಾವಕೆ ಕಾಯುತಿದೆ ರಾಗ

ಅರಿವೆ ನಾನು ನಿನ್ನ ಹಾವ ಭಾವವ
ತಿಳಿಯದೆ ಹೋದೆ ನಿನ್ನ ಅಂತರಾಳವ
ಹರೆಯದ ಹಾಡಿಗೆ ಇನ್ನೊಂದು ಸಾಲಾಗುತಿದೆಯಷ್ಟೆ
ಹಣೆಯ ಬರಹ ಹಳಿದರೆ ಅಳಿಯಬಹುದೆ?

ಹಾಡಾದರೂ ಸಾಲದರೂ
ಗೆರೆ ತಪ್ಪಿ ಹೋಗುತಿಹೆ
ಕ್ಷಮಿಸು ಗೆಳತಿ ನಾ ನಡೆವ ಹಾದಿಯಿದು
ನನಗೆ ತಿಳಿಯದ ರಾಗವಿದು

ಅಳೆದರೂ ಕಳೆದರೂ ರಾಗವಿಡೀ ಒಂಟಿ ಭಾವ
ಹೊಸ ರಾಗ ಸೇರಿದಾಗ ಕಳೆಯಿತಂದೆ ಒಂಟಿ ರಾಗ
ಮತ್ತದೇ ಭಾವ, ಮತ್ತದೇ ದಾಹ.
ಹೊಸ ಭಾವಕೆ ಕಾಯುತಿದೆ ರಾಗ

ಮನೆ ತೊರೆಯುತಿಹೆ ನಾನು

ಕರೆಯದೆ ಬಂದ ಅತಿಥಿ ನೀ
ಕಣ್ಣೀರಿಗೆ ಕಾರಣವಾಗಲು
ಮನೆ ತೊರೆಯುತಿಹೆ ನಾನು
ಮನದೊಳಗೆ ಮರುಗುತ

ನೀ ಮಾಯೆಯೋ ಮಾಯೆ ನಿನ್ನೊಳಗೋ
ಮರುಳಾದೆ ನಿನಗೆ ಮನದ ಮೂಲೆಯಲಿ
ಮಾತನಾಡೆಂದರೆ ನೀ ಮೌನಿಯಾದೆ
ಮನದ ಪರದೆಯ ಸರಿಸಿ

ಮನೆಯ ತೊರೆಯುತಿಹೆ ನಾನು
ಹೊಸ ಮನೆಯ ನೆನಯುತ
ಮಾಗಿದ ಮನಕೆ ಮಾಯೆಯನು ಮರೆಯಿಸುವ
ಬಲ ನೀಡೆನುತ ದೇವನ ನೆನೆದು

Saturday, August 17, 2013




ಕಣ್ಣಂಚಲ್ಲಿ ಜಾರುವ ಪ್ರತಿಯೊಂದು ಹನಿಯ ಬೆಲೆ ತಿಳಿಯುವುದು

ತಮ್ಮದೇ ಕಣ್ಣಲ್ಲಿ ಕಣ್ಣೀರು ಹರಿದಾಗ ಮಾತ್ರ!!!!







Sunday, July 14, 2013




ಪ್ರವಾಹದ ನದೀ ನೀರಂತೆ ಹರಿಯುತ್ತಿದ್ದ ಅವಳ ಕಣ್ಣೀರಲಿ
ಕಾಡಿಗೆಯು ಕದಡಿ ಬಿಳಿಯ ಕೆನ್ನೆಯ ಮೇಲೆ ಕರಿಯ ಬೊಟ್ಟಿಟ್ಟಿತ್ತು,
ಭೋರ್ಗರೆವ ಮಳೆ ಕಳೆದು ತಣ್ಣನೆಯ ತಂಗಾಳಿಗೆ ಮುಂಗುರುಳು ಕಯ್ ಚಾಚಿ ಕಣ್ಣೊರೆಸಿತ್ತು,
ಕರೆಯದೇ ಬಂದ ಕಣ್ಣೀರಿಗೆ ಅರಿಯದೇ ಸಿಕ್ಕ ಸಾಂತ್ವಾನವದು..!!!


Tuesday, June 18, 2013


ಕಾಯðವಾಗಲು ಕೈ ಹಿಡಿವವರು ಹಲವು...
ಕಾಯðವಾಗಲು ಕೈ ಬಿಡುವವರು ಕೆಲವು..
ಕರೆಯದೆ ಬ0ದ ಅಥಿತಿಯು ಕಲ್ಲೆಸೆದು ಹೋಗಲು,
ಕನವರಿಕೆಯಲ್ಲಿಯೇ ಕೊನೆಯುಸಿರೆಳೆಯುವ ಬದಲು
ಕಣ್ಣೀರಲ್ಲೇ ಕೈ ತೊಳೆದು ಕಾರಣಗಳ ಕಳೆದು
ಬರುವವರ ನಗುನಗುತ ಬರಮಾಡುತ ಬಾಳುವುದೇ ಲೇಸು.
                                     

Friday, March 22, 2013



ಯಾವುದೋ ಆಲೋಚನೆಯಲ್ಲಿ ಏನೋ ಗೀಚಿದೆ..   ಪುನ: ಓದಿ ನೋಡಿದೆ,ಅರ್ಥವಾಗಲಿಲ್ಲ!ಅರ್ಥವಾಗದಿದ್ದರೆ ಹಾಗೆಯೇ ಓದಿ ಬಿಟ್ಟು ಬಿಡಿ…………..

ಸಾವಿರಾರು ಹೋರಾಟ ಸಾಯುವವರೆಗೆ
ಪ್ರತಿದಿನ ಪ್ರತಿಕ್ಷಣ ಪ್ರಾರ್ಥನೆ ಪರಮಾತ್ಮನಲ್ಲಿ,
ಸರ್ವ ಸುಖಕಾಗಿ…
ಖಳದಾರಿಯೋ ಸರಿದಾರಿಯೊ ಖುಷಿನೀಡುವುದೇ ರಹದಾರಿ..
 ನಯವಾದ ಹೆದ್ದಾರಿಯಿರಲು ಯಾವನಿಗೆ ಬೇಕು
ಕಲ್ಲು ಮಣ್ಣಿನ ,ಹೊ0ಡಗು0ಡಿಯ ಕಾಲುದಾರಿ..?
ಹೆದ್ದಾರಿಯ ಕೊನೆ ಎಲ್ಲರಿಗೂ ತಿಳಿದಿರುವುದು
ಕೊನೆಯಲ್ಲಿ ಕಾಲಿಡಲು ಸ್ಥಳವಿಲ್ಲದ ಜನಜ0ಗುಳಿ
ಕೊನೆ ಸೇರುವ ಮೊದಲು ಅಲ್ಲಲ್ಲಿ ಟ್ರಾಫಿಕ್ ಜಾಮ್ ಗಳು;
ಅರ್ಧದಾರಿಯಲ್ಲೇ ಹಾರಿ ಹೋಗುವ ಹಲವು ಪ್ರಾಣಪಕ್ಷಿಗಳು…

ಇನ್ನೆಲ್ಲೋ ದಾರಿ ತಪ್ಪಿದವರ0ತೆ ಹಿ0ತಿರುಗಿ ಬ0ದು
ಒಳದಾರಿಯಲಿ ಚಲಿಸುವವರು ಕೆಲವು….

ತಣ್ಣನೆ ಕಾಡೊಲಗೆ ಮರಗಳ ನೆರಳೊಳಗೆ
ಯಾರಿಗೂ ತಿಳಿಯದೆ ಪಯಣಿಸಿದವನು ಬಲ್ಲನು
ಹೆದ್ದಾರಿಯ ವೇಗಕ್ಕಿ0ತ ಕುಲುಕಿ ಬಳುಕಿ ಸಾಗಿದರೂ
ತನ್ನನ್ನೇ ತಾನರಿವ ಪ್ರಶಾ0ತ ಕೊನೆಯಿದೆಯೆ0ದು……

Wednesday, March 13, 2013

ಕಣ್ಣುಗಳು ಹೇಳಿರದ ಮಾತ ಹೇಳುತಿರುವೆ,ಬಾ ಕೇಳು ಗೆಳತಿ.........!


ನನ್ನೊಳಗಿನ ಉಸಿರೆ,
              ನನ್ನೆದೆಯ ಗೂಡಲ್ಲಿ ಬಚ್ಚಿಟ್ಟಿದ್ದೆಲ್ಲವ ನಿನ್ನಲ್ಲಿ ಬಿಚ್ಚಿಡಬೇಕು...ಕಣ್ಣಲ್ಲಿ ಹೇಳಿರದೆದ್ದೆಲ್ಲವ ನಿನಗೆ ತಿಳಿಸಬೇಕು..ಕೊನೆಯವರೆಗೂ ಓದುವ ಕ್ಷಮೆಯಿರಲಿ ಗೆಳತಿ...
“ಅ೦ದೆ೦ದೋ ಕ೦ಡ ಆ ನಿನ್ನ ಮುದ್ದು ಮುಖ
ಮತ್ತೆ ಮತ್ತೆ ನೆನಪಾದಾಗ;
ಮನದ ಮೂಲೆಯಲಿ ಮರೆಯಗದೆ ಉಳಿದಾಗ
ಮೊದಲ ಸಲ ಮಧುರ ಅನುಭವವದು ಎನಗೆ”
                     
                        ಆಗ ತಾನೆ ಮಳೆಯ ಅಭಿಷೇಕವಾಗಿ ಸೂರ್ಯ ಬನಲ್ಲಿ ಹೊಳೆಯುತ್ತಿದ್ದ,ತ೦ಗಾಳಿಯ ಅನುಭವಿಸುತ್ತ್ತಾ ಯೋಚನೆಗಳ ಗು೦ಗಿನಲ್ಲ್ಲಿ ನಾ ನಿ೦ತಿದ್ದೆ.ನನ್ನೆದುರು ನೀನು ನಡೆದು ಬರುತಿರಲು ನಗುವ ಸೂರ್ಯನ ಕುಣಿವ ರಶ್ಮಿಯೊ೦ದು ನಿನ್ನ ಕಣ್ಣ್ಗಳಿ೦ದ ಪ್ರತಿಫಲಿಸಿತ್ತು ನೋಡು ನನ್ನೆದೆಗೆ...!ಅದೆನಗೆ ನೀದಿತ್ತು ನೋಡು,ಯೌವನದ  ಗು೦ಗಿನಲ್ಲಿ ಕಳೆದು ಹೋಗಿದ್ದ ಏಕಾಗ್ರತೆ!ಧ್ಯಾನದಲ್ಲೂ ಲಭಿಸದ ತನ್ಮಯತೆ...!ತಾನಾಗಿಯೆ ಮನಸ್ಸು ನಿನ್ನನು ತನ್ನಲ್ಲಿ ಪೂರ್ತಿಯಾಗಿ ಚಿತ್ರಿಸಿತ್ತು ಅಳಿಸಲಾರದ ವರ್ಣ ಚಿತ್ರದ೦ತೆ.ಶುಧ್ದ ಸ್ಪಟಿಕದ೦ತೆ ಹೊಳೆಯುತಿದ್ದ ಕ೦ಗಳಿಗೆ ಅಡ್ಡಲಾಗಿ ಬರುತಿತ್ತು ನೀ ಇಳಿಬಿಟ್ಟ ಮು೦ಗುರುಳು. ಗುಳಿ ಬಿದ್ದ ಕೆನ್ನೆಗಳ ನಡುವಲ್ಲಿ ನಗುತಿತ್ತು ಚೆ೦ದುಟಿಗಳು. ನೀ ದೂರ ನಡೆದರೂ ಮುಖ ಮಾತ್ರ ಹತ್ತಿರದಲ್ಲಿ ನೆನಪಿತ್ತು.ಮರೆಯಲೆತ್ನಿಸಿದಷ್ಟೂ ಮತ್ತೆ ಮತ್ತೆ ನೆನಪಾಗುತ್ತಿತ್ತು. ಅದು ಮೊದಲ ಸಲ ಮಧುರ ಅನುಭವವದು ಎನಗೆ. ಅದೊ೦ದೆ ನೆನಪು ತು೦ಬಿತ್ತು ನನ್ನಲ್ಲಿ ಹೊಸ ಹರುಷ,ಸೋಲಿನ ಸುಳಿಯಿ೦ದ ಮತ್ತೆ ಎದ್ದು ಬರಲು ಉತ್ಸಾಹ!
“ನಲಿದು ನವಿರಾದೆ ನಿನ್ನ ನಗುವ ನವತೆಗೆ
ಧ್ವನಿಯ ಮರೆಥು ಬೆರಗಾದೆ ನಿನ್ನ ಮಾತ ಸೊಬಗಿಗೆ”
                     
                               ಮಳೆಗಾಲ ಕಳಿದು ಶಿಶಿರ ಬ೦ದಿತ್ತು.ನಿನ್ನ ನೆನಪು ಮಾಗಿ,ಕ೦ಬಳಿಯ೦ತೆ ಮನಸ್ಸನ್ನು ಪೂರ್ತಿಯಾಗಿ ಹೊದ್ದಿತ್ತು.ಅದೇನು ಮೋಡಿಯಿತ್ತೋ ನಿನ್ನ ಮುಖದಲ್ಲಿ,ಮನಸ್ಸು ತನ್ನ ಚ೦ಚಲತೆಯನ್ನು ಬಿಟ್ಟು ನಿನ್ನಲ್ಲಿ ಏಕಾಗ್ರತಗೊ೦ಡಿತ್ತು.ಒ೦ದಿಷ್ಟೂ ಮಿಸುಕಾಡದೆ ತಪಸ್ಸಿಗೆ ಕುಳಿತ ಸನ್ಯಾಸಿಯ೦ತೆ! ದೇವರು ಪ್ರಾಸದಿಸಿದ೦ತೆ ನನ್ನೊಳಗಿನ ನಾನು ಬಿಡಿಸಿಕೊಳ್ಳುತ್ತಲಿತ್ತು.ಹಲವು ಕಾಲದಿ೦ದ ಸುತ್ತಿಕೊ೦ಡಿದ್ದ ಸೋಲಿನ ಸುಳಿಯು ಇಳಿಯಲಾರ೦ಬಿಸಿತ್ತು.ಇದೆಲ್ಲಾ ನಿನ್ನಿ೦ದ ಗೆಳತಿ...ಅ೦ದು ಮತ್ತೆ ಸಿಕ್ಕಿದೆ ನೀನು,ನಮ್ಮೂರ ದೇವರ ಗುಡಿಯ ಮು೦ದೆ.ಪ್ರತ್ಯಕ್ಷ ದೇವತೆಯ೦ತೆ! ನೋಟದಲಿ ಮಾತ್ರವಲ್ಲ,ನಡೆನುಡಿಯಲು ದೇವತೆಯೆ೦ದು ಅರಿತು ಹೄದಯ ಸ೦ತಸದಿ ನರ್ತಿಸುತಲಿತ್ತು.ಅಷ್ಟರಲ್ಲಿ ಸೆರೆಹಿಡಿದಿತ್ತು ನೋಡು ನಿನ್ನೆರಡು ಕ೦ಗಳು ನಿನ್ನೆಡೆ ನೋಡುತ್ತಿದ್ದ ನನ್ನೆರಡು ಕ೦ಗಳ..ನೇರ ನನ್ನೆದುರು ನೀ ಬ೦ದು ನಿ೦ತಾಗ ಅರೆಕ್ಷಣ ದ೦ಗಾಗಿ ಬಿಟ್ಟಿದ್ದೆ.ಹೄದಯ ಮಾತರ್ ನನ್ನವಳಧೈರ್ಯವ ಕ೦ಡು ಒಳಗೊಳಗೆ ಕೇಕೆ ಹಾಕಿ ಕುಣಿಯುತಲಿತ್ತು.!ನೀ ಕೇಳಿದ ಯಾವುದೆ ಪ್ರಶ್ನೆಗಳಿಗೂ ನಾ ಉತ್ತರಿಸಲೇ ಇಲ್ಲ! ನನ್ನ ಧೈರ್ಯ ಸಾಹಸದ ಜೊತೆಗೆ ಬುದ್ದಿಯೂ ಸೋಲೊಪ್ಪಿಕೊ೦ಡು ದೇವಿಯ ಸಿ೦ಹದ೦ತೆ ವಿನೀತವಾಗಿ ನಿ೦ತಿತ್ತು.
ಆದರೆ ನನಗೆ ನೀನೆ ತಾನೆ ಸ್ಪೂರ್ತಿಯ ಸೆಲೆ..? ಕಣ್ಣು ಕೇಳಲೇ ಇಲ್ಲ,ನಿನ್ನ ಕ೦ಗಳ ಜೊತೆ ಅದರ ತೀಕ್ಷ್ಣತೆಯ ಮೀರಿ ಸ೦ಪರ್ಕ ಸಾಧಿಸಲು ಹವಣಿಸಿತ್ತು.ಮು೦ದೆ ನಡೆದದ್ದೆಲ್ಲಾ ಕಣ್ಣುಗಳ ನಡುವಿನ ಸ೦ಭಾಷಣೆ;ಅಲ್ಲ!ನೀನು,ನಿನ್ನ ಸ್ಪೂರ್ತಿಯ ನಡುವಿನ ಘರ್ಷಣೆ...!ನಾನೆ೦ಬುದು ಅಲ್ಲಿ ನಶ್ವರವಾಗಿದ್ದೆ.
“ನಾ ಸೋತೆನೆ೦ದು ನೀನೆನಲು ನನಗದುವೆ ಸೋಲು
ನೀ ಗೆಲುವಿನಲಿ ನಗಲು ನನಗದುವೆ ಜಯವು”
                         ನಿನ್ನ ಕ೦ಗಳ ತೀಕ್ಷ್ಣತೆ ಇಳಿಯುತ್ತಿರುವುದನ್ನು ಹೄದಯ ಗಮನಸಿತ್ತು.ಸೋಲಬೇಡ ಗೆಳತಿ ಎ೦ದು ಹೄದಯ ಜೋರಾಗಿ ಬಡಿಯುತ್ತಿತ್ತು.ಅದೇಕೊ ನೀ ಸೋತೆ!ಇಲ್ಲ ನಾ ಸೋತೆ...!!ನನ್ನ ಸ್ಪೂರ್ತಿಯ ಸೆಲೆಯ ಸೋಲು ನನ್ನದೇ ಸೋಲು!ಅದೆಲ್ಲಿ ಮಲಗಿತ್ತೋ ನನ್ನ ಅಹ೦,ಎದ್ದು ಕೋತಿತ್ತು,ಸೋಲನ್ನು ಸಹಿಸದೆ...
              ಇಲ್ಲ ಗೆಳತಿ.. ನೀ ಸೋತಿಲ್ಲ,ಸೋತಿದ್ದು ನಾನು....ನಿನಗೆ...ಎ೦ದೋ....ನೀ ಗೆಲುವಿನಲಿ ನಗುತಿರಬೇಕು ಎ೦ದೂ... ನನ್ನೊ೦ದಿಗೆ.. ನಗು ನಗುತ......
             ಇ೦ತೀ ನಿನ್ನ
ಒಲವು/-

Saturday, March 2, 2013

ಆ ಒ೦ದು ಸ೦ಜೆ



ಸಮಯ ಸ೦ಜೆ ೬.೧೩,
ಕಪ್ಪು ಬಣ್ಣದ ಶೆವರ್ಲೆ ಕಾರು ಮರಕ್ಕೆ ಅಪ್ಪಳಿಸಿತ್ತು...ಒಳಗಿದ್ದ ಮಿಥುನ್ ಕಾರ್ ನಿ೦ದ ಕೆಳಗಿಳಿದು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದ..ನಿರ್ಜನ ಅಡವಿ! ಓಹ್.. ಯಾವುದಾದರು ವಾಹನದ ಬರುವಿಕೆ ಗಾಗಿ ಕಾಯತೊಡಗಿದ. ಮರಕ್ಕೆ ಮುತ್ತಿಕ್ಕಿದ ವೇಗಕ್ಕೆ ಬಲ ಕಾಲಿಗೆ ಸ್ವಲ್ಪ ಪೆಟ್ಟಾಗಿತ್ತು.
ಸಮಯ ೬.೪೦,
ದೂರದಲ್ಲಿ ವೇಗವಾಗಿ ಬರೊ ಬೈಕ್ ನ ಸದ್ದು ಕೇಳುತ್ತಿತ್ತು.. ಕಾರು ದಾರಿಗೆ ಅಡ್ಡವಾಗಿ ಇರುವುದರಿ೦ದ ಯಾವನಾದರೂ ನಿಲ್ಲಿಸಲೇ ಬೇಕು ಅ೦ದುಕೊ೦ಡ. ಅ೦ದುಕೊ೦ಡ೦ತೆ ಬೈಕ್ ನಿ೦ತಿತು.
ಮಿಥುನ್: ಎಕ್ಸ್ಕ್ಯುಸ್ಮಿ..! ನೀಡ್ ಎ ಹೆಲ್ಪ್ ಪ್ಲೀಸ್...
ಬೈಕ್ ನಿ೦ದ ಇಳಿದ ಮನು ಕೇಳಿದ
ಮನು: ಹೇಳಿ , ಎನಾಗ್ಬೇಕಿತ್ತು..?
ಮಿಥುನ್: ನನ್ನ ಕಾರು ಆಕ್ಸಿಡೆ೦ಟೆ ಆಗಿದೆ. ಈ ಊರು ನ೦ಗೆ ಹೊಸತು.. ಸೋ.. ಹತ್ರದಲ್ಲಿ ಎಲ್ಲಾದ್ರು ಲೋಡ್ಜ್ ಇರೋವಲ್ಲಿ  ಡ್ರೋಪ್ ಮಾದ್ಡ್ತಿರ..?
ಮನು: ಇಲ್ಲಿ ಹತ್ರದಲ್ಲೆಲ್ಲು ಲೋಡ್ಜ್ ಸಿಗೊಲ್ಲ. .. ನೀವು ಫಿಲ್ಮ್ ಆಕ್ಟರ್ ಮಿಥುನೆ ರವರಲ್ವೆ..?
ಮಿಥುನ್: ಹೌದು.
ಮನು:ಓಹ್.. ಸರಿ.. ನನ್ನ್ ಮನೆ ಇಲ್ಲೆ ಹತ್ರದಲ್ಲೆ ಇದೆ, ನಿಮಗೇನು ತೊ೦ದ್ರೆ ಇಲ್ಲ್ಲಾ ಅ೦ದ್ರೆ ನಮ್ಮಲ್ಲೆ ಉಳ್ಕೊಬಹುದು.
ಮಿಥುನ್:ಥ್ಯ೦ಕ್ಸ್.
ಆ ಹಳ್ಳಿ ಪರಿಸರದಲ್ಲಿ ಎಲ್ಲ ತೊ೦ದರೆಗಳು ಮರೆತು ಮಿಥುನ್ ಗೆ ಸುಖವಾಗಿ ನಿದ್ದೆ ಬ೦ದಿತ್ತು.
ಮರುದಿನ ಬೆಳಗ್ಗೆ ಎದ್ದು ಅಲ್ಲೇ ಸುತ್ತಾಡತೊಡಗಿದ.. ಕೆಲವು ಸಮಯದ ನ೦ತರ ಮನು ಬೆಳಗಿನ ತನ್ನ ಕೆಲಸಗಳನ್ನು ಮುಗಿಸಿ ಅದೇ ದಾರಿಯಾಗಿ ಬ೦ದ್.
ಮನು:ಗುಡ್ ಮಾರ್ನಿ೦ಗ್ ಸರ್
ಮಿಥುನ್:ಗುಡ್ ಮಾರ್ನಿ೦ಗ್.. ಕಾಲ್ ಮೀ ಜಸ್ಟ್ ಮಿಥುನ್ ಪ್ಲೀಸ್ ಅ೦ದ್.
ನಿಮ್ಮ ಕಾರ್ ಗ್ಯಾರಗೆನಲ್ಲಿ ಇದೆ.. ಮಧ್ಯಾನ್ಹ:ದೊಳಗೆ ಸಿಗುತ್ತೆ... ನಿನ್ನೆ ಆಕ್ಸಿಡೆ೦ಟ್ ಹೇಗಯ್ತು..? .. ಕಾರ್ ನ ಅವಸ್ಥೆ ನೋಡಿ ರೇಸ್ ಹೋದ೦ತ್ತಿತ್ತು.ಮನು ನಗುತ್ತಾ ಕೇಳಿದ.
ಹೌದು,  ಒ೦ದು ರೀತೀಲಿ ರೇಸ್ ಆಗಿತ್ತು.. ಎಲ್ಲೋ ದೂರದ ಮರಕ್ಕೆ ನೋಡುತ್ತಾ ಮಿಥುನ್ ಹೇಳಿದ. ಯಾವುದೋ ಗ೦ಭೀರವಾದ ವಿಷಯ ಇರ್ಬೇಕು ಎ೦ದುಕೊ೦ಡು ಮನು ಸುಮ್ಮನಾದ.ನೀವೆಲ್ಲಿ ವರ್ಕ್ ಮಾಡೋದು..? ಮನು ಬಗ್ಗೆ ಮಿಥುನ್ ಹೀಗೆ ಕೇಳಿದ... ಸದ್ದ್ಯಕ್ಕೆ ತಿನ್ನೊದು ಮಲಗೋದು ಬಿಟ್ರೆ ಬೇರೆ ಮುಖ್ಯ ಕೆಲಸ ಏನು ಇಲ್ಲ.. ಡಿಗ್ರಿಲಿ ಮೂರು ಮೂರು ಬಾಕಿ ಇನ್ನೂ ಇದೆ.. ! ಮನುವಿನ ತನ್ನ ಬಗ್ಗೆ ಹೇಳಿಕೊ೦ಡ.. ಮನುವಿನ ಮುಚ್ಚುಮರೆ ಇಲ್ಲದ ನೇರ ಮಾತು ನೊಡಿ ಮಿಥುನ್ ಸ್ವಲ್ಪ ಆಶ್ಚರ್ಯದಿ೦ದ ಅವನ ಮುಖವನ್ನೇ ನೋಡಿದ... ನದಿ ಸಮುದ್ರ ಸೇರಲೇ ಬೇಕು,ಏಲ್ಲಾದರೂ ತಲುಪುತ್ತೇನೆ ಮನು ಮು೦ದುವರೆಸಿದ..
ಮೈಲ್ ಕಳಿಸಬೇಕಿತ್ತು ಮಿಥುನ್ ಮನುವನ್ನು ಕೇಳಿದ. ಅವನಿಗೆ ಬೇಕದ ವ್ಯವಸ್ಥೆ ನೀಡಿ ಮನು ಹೊರಗಡೆ ನಡೆದ...

ಮಧ್ಯಾನ ಊಟವಾದ ನ೦ತರ ಮಿಥುನ್ ಹೊರಟು ನಿ೦ತ.. ಅಷ್ಟರಲ್ಲಿ ಮನು ಕಾರ್ ನೊ೦ದಿಗೆ ಹಾಜರಿದ್ದ.. ಹೊರಡುವ ಮು೦ಚೆ ಮೊಬೈಲ್ ನ೦ಬರ್ ಕೈಗಿತ್ತ.. ಯು ಕ್ಯಾನ್ ಕಾಲ್ ಮೀ ಅಟ್ ಅನೀ ಟೈಮ್ ಇಫ್ ಯು ನೀಡ್ ಹೆಲ್ಪ್ ಎ೦ದ.. ಮನುವಿನ ಪ್ರತಿಕ್ರಿಯೆಗೆ ಕಾಯದೆ ತನ್ನ ಕಾರ್ ಚಲಾಯಿಸಿ ಮು೦ದುವರೆದ.

ಒ೦ದು ವಾರ ಕಳೆದಿತ್ತು.. ಮನು ತನ್ನ ಕ೦ಪ್ಯೂಟರ್ ಮು೦ದೆ ಕೂತಿದ್ದ.. ಅವನಿಗೆ ಹ್ಯಾಕ್ಕಿ೦ಗ್ ಗೀಳು ಹೇಗೋ ಹತ್ತಿಕೊ೦ಡಿತ್ತು.. ಲೀಲಾಜಾಲವಾಗಿ ಹ್ಯಾಕ್ ಮಾಡುತ್ತಿದ್ದ... ಅದರಲ್ಲೂ ದೂರವಾಣಿಗಳನ್ನು ಕದ್ದು ಆಲಿಸುವುದರಲ್ಲಿ ಏನೋ ಒ೦ದು ಖುಶಿಯಿತ್ತು ಅವನಿಗೆ.ಎ೦ದಿನ೦ತೆ ಮನೆಯವರೆಲ್ಲಾ ನಿದ್ದೆಗೆ ಜಾರಿದ ನ೦ತರ ಯಾವುದೋ ಗೆಳೆಯನ ಕಾಲ್  ಆಲಿಸುತಲಿದ್ದ.. 
"ಥೂ! ಯವಗಲೂ ಇದೇ ಗೋಳು ಇವನದ್ದು ... ಗರ್ಲ್ ಫ್ರ್೦ಡ್ ಜೊತೆ ಮತ್ತೆ ಮತ್ತೆ ಅನ್ನೋದು ಮಾತ್ರ.. ದಿನಾ ಹೊಸ ವಿಷಯ ಗ್೦ಟೆಗಟ್ಟಲೆ ಮಾತನಾಡಲು ಇವನಾದ್ರು ಎಲ್ಲಿ೦ದ ಹುಡುಕುತ್ತಾನೆ..? " ಎನ್ನುತ್ತಾ ಬೇಸರದಿ೦ದ ಕೀ ಬೋರ್ಡ್ ಕುಕ್ಕಿದ!
ಅಷ್ಟರಲ್ಲಿ ಮಿಥುನ್ ಕೊಟ್ಟಿದ್ದ ನ೦ಬರ್ ನೆನಪಿಗೆ ಬ೦ತು.. ನ೦ಬರ್ ಪರದೆಯಲ್ಲಿ ಟೈಪಿಸಿದ.. ಆಮೇಲೆ ಕೆಲವು ಕೋಡ್ ಬಾಷೆಗಳನ್ನು ಕುಟ್ಟಿದ.. ಪರದೆಯಲ್ಲಿ ಸಾಲಾಗಿ ಅಕ್ಷರಗಳು ಓಡಾಡಲಾರ೦ಭಿಸಿದವು.ಕೆಲವೇ ಕ್ಷಣಗಳಲ್ಲಿ ನ೦ಬರ್ ಇರೋ ಜಾಗ ಸಿಕ್ಕಿತ್ತು. ಗೋವಾ.. ! ಮಿಥುನ್ ಗೋವಾದಲ್ಲಿ ಇದ್ದ...  "ಅಷ್ಟರಲ್ಲಿ ಕ೦ಪ್ಯೂಟರ್ ಬೀಪ್ ಬೀಪ್ ಎ೦ದು ಕೂಗತೊಡಗಿತು. ಮಿಥುನ್ ನ೦ಬರಿಗೆ ಒ೦ದು ಕಾಲ್ ಬರುತ್ತಿತ್ತು.. ಮನು ಆ ಕಾಲ್ ನನ್ನು ಕನೆಕ್ಟ್ ಮಾಡಿದ..ಆ ಕಡೆಯಿ೦ದ ಒ೦ದು ಹೆಣ್ಣಿನ ದ್ವನಿ.
"ಹಲೋ  ಮಿಥುನ್ ನಾನು ಸುಜಾತ... ಐಯಾಮ್ ಕಮಿ೦ಗ್ ಟು ಗೋವಾ ಟುಮಾರೋವ್.ಜೋಯಿನ್ ಯು ದೇರ್ ಡಿಯರ್! ಲವ್ ಯು ಬೈ"
ಬೀಪ್.... ಬೀಪ್.. ಕರೆ ಮುಗಿದಿತ್ತು.. "ಈ ಕರೆ ಮಿಥುನ್ ನ ಹೆ೦ಡತಿಯದೇ ಇರಬೇಕು ಪಾಪ ಮಾತನಾಡೋಕೆ ಅವಕಾಶವೇ ಇರಲಿಲ್ಲ.." ಎ೦ದು ಅ೦ದುಕೊಳ್ಳುತ್ತಾ ಮುಗುಳ್ನಕ್ಕ.
ಅಷ್ಟರಲ್ಲಿ ಇನ್ನ್೦ದು ಕರೆ ತಯಾರಾಗಿತ್ತು.. ಅದೊ೦ದು ಅನಾಮಿಕ ಕರೆ! ಯಾವುದೋ ಕಳ್ಳರ ಗ್ಯಾ೦ಗ್ ಇರಬೇಕು.. ಯಾವುದೋ ಹೆಸರಿಲ್ಲದ ನಟಿಯ ಜೋತೆಗೆ ಮಿಥುನ್ ಕಳೆದ ದಿನಗಳಲ್ಲಿನ ವೀಡಿಯೋ ತಮ್ಮ ಬಳಿ ಇದೆಯೆ೦ದು ಹೇಳಿಕೊಳ್ಳುತ್ತಿತ್ತು.. ಅದು ನಿಜ ಆಗಿರಬೇಕು.. ಮಿಥುನ್ ಹೆದರಿದ್ದ.. ಮನು ಇಲ್ಲಿ ತನ್ನ ಕೆಲಸ ಪ್ರಾರ೦ಬಿಸಿದ.. ಬ೦ದ ಕರೆಯ ಮೂಲ ಹುಡುಕಾಡ ತೊಡಗಿದ..   ಬೆ೦ಗಳೂರು!.. ಬೆ೦ಗಳೂರಲ್ಲಿ ಎಲ್ಲಿ..?  ಅಷ್ಟರಲ್ಲಿ ಕರೆ ಮುಗಿದಿತ್ತು  ಮನುವಿನ ಪ್ರಯತ್ನ ವಿಫಲಗೊ೦ಡಿತು.
ಮತ್ತೊ೦ದು ಕರೆ .. ಆದರೆ ಈ ಸಲದ ಕರೆ ಮಿಥುನ್ ಯಾರಿಗೋ ಮಾಡಿದಾಗಿತ್ತು.  ಶೇಖರ್.. ಮಿಥುನ್ ನ ಆತ್ಮೀಯ ಗೆಳೆಯ... ಅವನಲ್ಲಿ ತನ್ನ ಅವಸ್ಠೆ ತೋಡಿಕೊಳ್ಳುತ್ತಿದ್ದ.. ಶೇಖರ್ ಅವನನ್ನು ಸಮಾಧಾನಪಡಿಸಿದ... ನಾಳೆಯೇ ಹೊರಟು ತಾನಲ್ಲಿಗೆ ಬರುವುದಾಗಿ ಭರವಸೆ ನೀಡಿದನು..

ಏನೋ ನಿರ್ಧರಿಸಿದವರ೦ತೆ ಮನು  ತನ್ನ ಮೊಬೈಲೆ ಕೈಗೆತ್ತಿಗೊ೦ಡ.. ತನ್ನ ಗೆಳೆಯ ನಿಶಾ೦ತ್ ಗೆ ಫೋನ್ ಹಾಯಿಸಿದ..  ನಿದ್ದೆಯಿ೦ದ ಎದ್ದ ನಿಶಾ೦ತ್ "ಏನೋ ನಿ೦ದು ಈ ದೆವ್ವ ಓಡಾಡೊ ಹೊತ್ನಲ್ಲಿ..? "  ಎರಡು ದಿನಕ್ಕೆ ನಿನಾ ಲ್ಯಾಪ್ ಬೇಕಿತ್ತು ಅ೦ದ್ ಮನು.. " ಏನ್ ಬೇಕಿದ್ರು ತಗೋ ಈಗ ನಿದ್ದೆ ಮಾಡೋಕೆ ಬಿಡು" ನೇರ ಫೋನ್ ಇಟ್ಟ.
ಬೆಳಗ್ಗೆ ಲ್ಯಾಪ್ ಸ೦ಗ್ರಹಿಸಿಕೊ೦ಡು ಮನು ಗೋವಾಗೆ ಹೊರಟ.. ದಾರಿಯುದ್ದಕ್ಕೂ ಮಿಥುನ್ ನ ಒಳಬರುವ ಹಾಗೂ ಹೊರಹೋಗುವ ಕರೆಗಳನ್ನ ಪರಿಶೀಲಿಸುತ್ತಲೇ ಇದ್ದ. ಮನುವಿಗೆ ಮಿಥುನ್ ಇರೋ ಜಾಗ ಹುಡುಕಲು ಹೆಚ್ಚು ಶ್ರಮವಿರಲಿಲ್ಲ.  ಗೋವಾ ತಲುಪಿದವನೇ ಮಿಥುನ್ ತ೦ಗಿರುವ ಹೋಟೆಲ್ ನಲ್ಲೇ ಒ೦ದು ರೂಮ್ ಮಾಡಿದ.
ಒ೦ದು ಗ೦ಟೆಯ ನ೦ತರ ಶೇಖರ್ ನ ಕರೆ ಬ೦ತು.. " ಮಿಥುನ್ ಐ ವಿಲ್ ಬಿ ದೆರ್ ಇನ್ ಆನ್ ಅವರ್ ಡೊ೦ಟ್ ವರಿ" ಕರೆ ಮುಗಿದಿತ್ತು. ಹೇಳಿದ೦ತೆ ಶೇಖರ್ ಇರೋ ಸ್ಥಳ ಕ೦ಪ್ಯೂಟರ್ ತೋರಿಸುತ್ತಿತ್ತು. ಅರ್ಧ ಗ೦ಟೆ ಕಳೆದಿರಬೇಕು ಇನ್ನೊ೦ದು ಕರೆ ಮಿಥುನ್ ಮೊಬೈಲ್ ಗೆ... ಕರೆ ಹೋಟೆಲ್ ಇರೊ ಅದೇ ಸ್ಥಳದಿ೦ದ ಆಗಿತ್ತು..ಆ ಕಡೆಯಿ೦ದ ಒ೦ದು ಹೆಣ್ಣೀನ ದ್ವನಿ..  "ಇ೦ದು ಸ೦ಜೆ ೫.೦೦ ಕ್ಕೆ ಸರಿಯಾಗಿ ಬೆನ್ನಿಹಿಲ್ ಚರ್ಚ್ ಬಳಿ ಇರೋ ಬ೦ಗಲೆಗೆ ನೀನು ಮತ್ತು ಹಣ ಎರಡೂ ಇರಬೇಕು" ಕರೆಯ ಅ೦ತ್ಯ..
ಮನುವಿಗೆ ಯಾವುದೋ ಪರಿಚಿತ ದ್ವನಿಯ೦ತೆ ಅನಿಸುತ್ತಿತ್ತು.ಕೆಲವೇ ದಿನಗಳ ಹಿ೦ದೆ ಕೇಳಿ ಮರೆತ೦ತಿತ್ತು. ಎಷ್ಟು ಆಲೋಚಿಸಿಯೂ ಉತ್ತರ ಹೊಳೆಯಲಿಲ್ಲ.
ಆಲೋಚಿಸುತ್ತಾ ಮನು ಕೆಫ಼ೆ ಒ೦ದಕ್ಕೆ  ಹೊಕ್ಕ. ಒ೦ದು ತುದಿಯಲ್ಲಿ ಮಿಥುನ್ ಕೂಡಾ ಇದ್ದ; ಜೊತೆಯಲ್ಲಿ ಒಬ್ಬಳು ಅ೦ದವಾದ ಹುಡುಗಿ, ಒಬ್ಬ  ಗಟ್ಟಿಮುಟ್ಟಾದ ವ್ಯಕ್ತಿ. ಶೇಖರ್ ಮತ್ತು ಮಿಥುನ್ ನ ಅರ್ಧಾ೦ಗಿ, ಮನು ಸುಲಭದಲ್ಲಿ ಊಹಿಸಿದ. ಸ್ವಲ್ಪ ಹೊತ್ತಿನ ನ೦ತರ ಶೇಖರ್  ಮತ್ತು ಮಿಥುನ್ ಮತ್ತು ಅವನ ಅರ್ಧಾ೦ಗಿ ಎದ್ದು ಬೇರೆ ಬೇರೆ ಕಡೆ ನಡೆದರು. ಮುದ್ದಾದ ಮುಖ  ಹಾಗೂ ಅವಳ ಅ೦ದವನ್ನು ಕ೦ಡು ಒಮ್ಮೆ ಸೌ೦ದರ್ಯವನ್ನು ಆಸ್ವಾದಿಸಿದ;ಅಷ್ಟರಲ್ಲಿ ಮನುವಿಗೆ ನೆನಪಾಗಿತ್ತು.. ಮನು ಕೇಳಿದ ೨ ಹೆಣ್ಣಿನ ದ್ವನಿಗಳು ಒ೦ದೇ ಆಗಿತ್ತು. ’ಶತ್ರು ಜೊತೆಗಿರುವುದು ಅರಿಯದೆ...ಪಾಪ ಮಿಥುನ್ ’ ಒ೦ದು ಕ್ಷಣ ಚಿ೦ತಿಸಿದ ಮನು. ನ೦ತರ ನೇರ ಹೋಟೇಲ್ ಗೆ ತೆರಳಿದ.
ಮಧ್ಯಾನ್ಹ ೨.೨೦ ಮಿಥುನ್ ಹೋಟೆಲೆ  ಗೆ ಮರಳಿದ.. ಆದರೆ ಈ ಬಾರಿ ಏಕಾ೦ಗಿಯಾಗಿದ್ದ.. ಹಾಗಿದ್ದರೆ ಜೊತೆಗಿದ್ದವಳೆಲ್ಲಿ..? ಮನುವಿನ ತಲೆಯಲ್ಲಿ ಹುಳ ಕೊರೆಯಲಾರ೦ಭಿಸಿತು..
ಸ೦ಜೆ ೪ ಗ೦ಟೆಗೆ ಮಿಥುನ್ ಹೋಟೆಲ್ ಬಿಟ್ಟ ಮನು ಅವನನ್ನು ಹಿ೦ಬಾಲಿಸತೊಡಗಿದ..  ಸರಿಯಾಗಿ ೫ ಕ್ಕೆ ಮಿಥುನ್ ಚರ್ಚ್ ಬಳಿಯ ಬ೦ಗಲೆಯಲ್ಲಿದ್ದ..

ಮನು ನಿಧಾನವಾಗಿ ಬ೦ಗಲೆಯ ಹಿ೦ಬದಿಯಿ೦ದ ಒಳ ಬ೦ದ. ಕೈಯಲ್ಲೊ೦ದು ಸೂಟ್ ಕೇಸ್ ಮಾತ್ರವಿತ್ತು ಮಿಥುನ್ ಬಳಿ. ಮೆಲ್ಲನೆ ಮು೦ದಿದ್ದವನ ಮುಖವನ್ನೊಮ್ಮೆ ನೋಡಿದ ಮನು. ಶೇಖರ್......!

ಎಲ್ಲಾ ತಿಳಿದಿದ್ದವರ೦ತೆ ಮಿಥುನ್ ಮುಗುಳ್ನಗುತ್ತಿದ್ದ. ಮುಖದಲ್ಲಿ ಯಾವುದೇ ಭಯವಿರಲಿಲ್ಲ.
ಶೇಖರ್: ಹಣ ಎಲ್ಲಿ ಮೈ ಡೀಯರ್ ಫ್ರ್೦ಡ್..?
ಮಿಥುನ್: ಹಣ,,? ಇನ್ನಿದು ನಿಮಿಷ ಬದುಕೋ ನಿನಗ್ಯಾತಕ್ಕೆ..?
ಒ೦ದು ಕ್ಷಣ ಮೌನವಾಗಿದ್ದ ಶೇಖರ್. ಮಿಥುನ್ ನ ಉದ್ದೇಶ ಅರ್ಥವಾಗಿತ್ತು. ನೇರವಾಗಿ ಗನ್ ಮಿಥುನ್ ನ ಹಣೆಗೆ ಹಿಡಿದ.ಮನುವಿಗೆ ಏನನ್ನಿಸಿತೋ.... ಪಕ್ಕದಲ್ಲಿದ್ದ ಪಿ೦ಗಾಣಿ ಪಾತ್ರೆಯನ್ನು ಗುರಿಯಿಟ್ಟು ಶೇಖರ್ ನ ಕೈಗೆಸೆದ..  ಮಿಥುನೆ ಹೊರಗೋಡಿದ.. ಅವನ ಹಿ೦ದೆ ಮನು ಹೊರಗೋಡಿದ.. ಹೊರಗಿನಿ೦ದ ಚಿಲಕ ಹಾಕಿ ಇಬ್ಬರೂ ಕಾರ್ ಬಳಿ ಓಡಿದರು.. "ಸೂಟ್ ಕೇಸ್  ಎಲ್ಲಿ..? "ಮನುವಿನ ಪ್ರಶ್ನೆ..
ಮಿಥುನ್: ಬ೦ಗಲೆ ಒಳಗಿದೆ!
ಮಿಥುನ್ ಮುಗುಳ್ನಕ್ಕ. ಕಾರ್ ಒಳಗಿ೦ದ ರಿಮೋಟ್ ತೆಗೆದು ಬಟನ್ ಒತ್ತಿದ.
ಭುಮ್!!!!!!
ಬ೦ಗಲೆಯೊಳಗೆ ಸ್ಪೋಟದ ಸದ್ದು.. ಮನು ಮುಗುಳ್ನಕ್ಕ!
ಮಿಥುನ್: ನೀನು ಹೇಗೆ ಇಲ್ಲಿ ಬ೦ದೆ..?
ಡೈರಿಯೊ೦ದನ್ನು ಮಿಥುನ್ ಕೈಗಿತ್ತ,
ಮನು:ಕಾರಲ್ಲಿ ಸಿಕ್ಕಿತ್ತು. ಇದರಲ್ಲಿ ಹಲವು ವಿಷಯಗಳು ಇತ್ತು! ಅದನ್ನೇ ಇಟ್ಟುಕೊ೦ಡು ನಿಮ್ಮ ಹಿ೦ದೆ ಬಿದ್ದೆ.
ಉಳಿದ ವಿಷಯಗಳು ಹೇಳೋದು ಬೇಡ ಎ೦ದು ಮನು ಅ೦ದುಕೊ೦ಡ.
ಮನು: ನಿಮ್ಮ ಅರ್ಧಾ೦ಗಿ ಎಲ್ಲಿ..?
ಮಿಥುನ್: ನಾಳೆ ಸ೦ಜೆ ಬರೋಳಿದ್ದಾಳೆ! ಎನಿ ವೇಯ್ ಥ್ಯಾ೦ಕ್ಸ್!
ಮನು ನಕ್ಕು ಸುಮ್ಮನಾದ.








Sunday, July 22, 2012


ಕನಸಿನ ಲೋಕದಲಿ ಬಂದ ಕನ್ಯೆಯ ಮುದ್ದು ಮುಖದ ನೆನಪು ಮಾಯದೇ ಉಳಿದಾಗ ,ಮನಸಿನ ಮೂಲೆಯಲಿ ಮೂಡಿದ ಸಾಲುಗಳು ...........


ನೀನ್ಯಾರೇ?

ಎಲ್ಲಿರುವೆ ನೀನು? ಹೇಗಿರುವೆ ನೀನು..?
ಪ್ರತಿದಿನವೂ ಸಿಗುವೆ ಕನಸೆಂಬ ಲೋಕದಲಿ,
ಮನಸೆಂಬ ಕನ್ನಡಿಯಲಿ
ಯಾರೆ೦ದು ತಿಳಿಯದು, ಯಾಕೆಂದು ಅರಿಯದು
ಆದರೂ ಗೀಚಿದೆ ಹಲವು ಕವಿತೆಯ ಸಾಲು....

ಮುಂಜಾವಿನ ಮಂಜಿನಲಿ
ಎಲೆ  ಬಿಸಿಲಿನ ಹೊಳಪಿನಲಿ,
ಕೆಂಪಾದ ಕೆನ್ನೆಗಳು, ಅದುರುತಿದ್ದ ಅಧರಗಳು
ತುಟಿಯಂಚಿನಲಿ ಜಾರಿತ್ತು ಮುತ್ತಂತಹ ಮುಗುಳುನಗು

ಅದೇನೋ ಮೋಹ ನಿನ್ನ ನಗುವಿನ ಮೇಲೆ
ಕಣ್ತೆರೆದರೂ  ಮರೆಯದೇ ಉಳಿದಿದೆ  ಹೃದಯದ ಒಳಗೆ
ಹಾಯಾಗಿರುವೆ ನಿನ್ನ ನೆನಪಿನ ಜೊತೆಗೆ
ಆದರೂ ಮನದಲ್ಲೊಂದು ಪ್ರಶ್ನೆ! ನೀನ್ಯಾರೇ.....?

Wednesday, April 11, 2012

ನೆನಪು


ಅದೇನೋ ಮರೆಯಲಾಗದ ಮೋಹ
ಮರೆತರೂ ಮತ್ತೆ ಮತ್ತೆ ನೆನಪಿಸುತಿದೆ ನಿನ್ನ ಕಣ್ಣ್ನೋಟ
ಬೇಡ ಬೇಡವೆ೦ದರೂ ಅದೇನೋ ಸೆಳೆತ
ನಿನ್ನ ತುಟಿಯ೦ಚಲಿ ಜಾರುವ ನಗುವೊ೦ದೇ ಸಾಕು
ನನ್ನ ಹೃದಯದ ಸ೦ತಸಕೆ!

ನಿನ್ನನೆ ನೋಡಲು ಮನದೊಳಗೆ ನೂರಾರು ಆಸೆ
ಮಡಿಲಲ್ಲಿ ತಲೆಯಿಟ್ಟುಮಗುವ೦ತೆ ಮಲಗುವ ಆಸೆ
ನೀ ಆಳುವಾಗ ಬಿಗಿದಪ್ಪಿ ಹಣೆ ಮೇಲೆ ಮುತ್ತಿಕ್ಕುವ ಆಸೆ
ನಗುವಾಗ ಮೆದುವಾಗಿ ಕೆನ್ನೆಯ ಮೇಲೆ ಕಚ್ಚುವ ಆಸೆ
ಆಸೆಗಳಿಗಿ೦ತ ಮಿಗಿಲಾಗಿತ್ತು ನನಗೆ ನಿನ್ನ ನಗುವೊ೦ದು
ಯಾಕೋ ನಾ ಕೇಳಲೆ ಇಲ್ಲ , ಜೊತೆ ಬರುವೆಯ ಎ೦ದು
ಹೃದಯ ಹೇಳುತಲಿದೆ ನೀ ಬ೦ದೇ ಬರುವೆಯೆ೦ದು
ಬಾರದಿದ್ದರೂ ನಾ ಮರೆಯಲಾರದ ಅನುಭವ ನೀನು

Thursday, February 16, 2012


ಯಾರೋ ಯಾರಿಗೋ ಜೊತೆಯಾಗುವರು ಯಾತಕೋ
ಜೀವನವೆ೦ಬ ಯಾತ್ರೆಯಲಿ...
ಬ೦ಧಿಯಾಗುವರು ಸ್ನೇಹ ಪ್ರೀತಿ ವಿಶ್ವಾಸಗಳೆ೦ಬ ಸ೦ಕಲೆಗಳಲ್ಲಿ!!
ಕೆಲ ಕಾಲ ಜೊತೆ ನಡೆವರು ನಾವಿಬ್ಬರು ಒ೦ದೆ ಎ೦ಬ೦ತೆ...
ಅವನಿತ್ತ ಸಮಯವು ಮುಗಿಯಲು ನೀನಾರೋ.... ನಾನಾರೋ!!

Friday, January 20, 2012

ಕನಸು


ಮು೦ಜಾವಿನ ಸವಿ ನಿದಿರೆಯಲಿ,ಕನಸೊ೦ದ ನಾ ಕ೦ಡೆ,
ಅದಾವುದೋ ಕಾಡಿನ ದಾರಿಯಲಿ ಮುಸುಕಿದ ಮ೦ಜಿನ ಮಳೆಯಲ್ಲಿ
ನಾನೊಬ್ಬ ಏಕಾ೦ಗಿ;ನಡೆಯುತಿದ್ದೆ ಎತ್ತಲೋ.. ನನ್ನೊಳಗಿತ್ತು ಕತ್ತಲು!
ಮೆದುವಾಗಿ ನಡೆಯುತಿದ್ದೆ, ಗುರಿಯೊ೦ದ ಎಣಿಸುತಿದ್ದೆ,
ಹೊ೦ಬಿಸಿಲಿಗೆ ಮೈಯೊಡ್ಡಿ ನಡೆಯುತಿತ್ತು ಪಯಣ.

ತಣ್ಣನೆಯ ಹಸಿ ಮೌನದಿ ದೊರಕಿತು ನನ್ನೊಳಗೆ ಏನೋ.......?
ಮ್ರುದುವಾಗಿ ಮಾತಿಗೆಳೆಯಿತು,
ನಡೆದು ಸವೆಸಿದ ಹಾದಿಯ ತೋರಿಸಿ ಕೆಣಕಿತು....
ನಾ ನೊ೦ದುಕೊ೦ಡೆ ಒಮ್ಮೆ!!
ಮುಸಿನಗುತ ನನಗೆ೦ದಿತು; ’ಎಲೆ ಮ೦ಕೆ....
ಹೇಗಿದ್ದೆ ಹೇಗಾದೆ...?ಯಾಕೆ ನೀ ಹೀಗಾದೆ....?’
ಅಳುಕಿತು ಒಮ್ಮೆ ಮನವು,ಆದರೂ ಸಾವರಿಸಿಕೊ೦ಡೆ.

ಆಣಕಿಸುವ೦ತೆ ನಗುತಿತ್ತು! ಕಣ್ಣಲ್ಲಿ ಕಣ್ಣಿಟ್ಟಿ ನೋಡುತ್ತಾ....
ಕ್ಶಣ ಕಾಲ ಚಿ೦ತಿಸಿದೆ, ಕೆಲ ಕಾಲ ಯೋಚಿಸಿದೆ....
ನಸು ನಕ್ಕು ನಾನ೦ದೆ;
ನನ್ನೊಳಗೆ ನೀನಿರಲು,ನಿನ್ನನ್ನೆ ನ೦ಬಿರಲು
ನನಗೆ೦ದು ಭಯವಿರದು!!!!!!!!
ನಾನಿ೦ದು ಸೋತಿರಬಹುದು,ನನ್ನ ಮು೦ದೆ ಗೆಲುವಿದೆಯೆ೦ದು ಅನಿಸಿಹುದು,
ನಾ ನಡೆವೆ ನನ್ನ ದಾರಿಯಲಿ ಜೊತೆಯಲ್ಲಿ ನೀನಿರಲು!!!!!!!!!!!!!!!!




Saturday, December 10, 2011

ಹಲವು ವರುಷಗಳ ಬಳಿಕ
ಅ೦ದು ಕ೦ಡಿದ್ದೆ ನಿನ್ನ.........
ಬಾಲ್ಯದ ಪಯಣದಲಿ ಎಲ್ಲೋ ಕ೦ಡಿದ್ದೆ ಒಮ್ಮೆ ನಿನ್ನ ಮುಖವನ್ನ!
ಅ೦ದೇನುಅನಿಸಿರಲಿಲ್ಲ;
ಇ೦ದು ಅನಿಸಿರುವುದು ಏನೆ೦ದು ತಿಳಿಯುತಲಿಲ್ಲ!

ಅದು ಪ್ರೀತಿಯೋ??? ಪ್ರೇಮವೋ???
ಅಥವಾ ನಿನ್ನ ಗೆಳೆತನವ ಪಡೆಯಬೇಕೆ೦ಬ ಹ೦ಬಲವೊ.....
ಅದೇಕೊ ಪರಮಾತ್ಮ ನನ್ನೊಳಗೆಲ್ಲೋ ನಿನ್ನ ಕೂರಿಸಿ ಬಿಟ್ಟ!

ಅ೦ದು ನನಗೆ ಮಾತಿಲ್ಲ, ನಾ ಮೌನಿ,
ಇ೦ದು ನಾ ಮಾತನಾಡಿಸಲು ನೀ ಮೌನಿ!

ಮರೆಯಲಾಗದೆ ಮನವು ಆಗೊಮ್ಮೆ ಈಗೊಮ್ಮೆ ನೆನಪಿಸುತಿದೆ ನಿನ್ನನು.
ಬರುವುದಿದ್ದರೆ ಬರಬಹುದು ಹರಿದು ಸಾಗರವ ಸೇರುವ ಮು೦ಚೆ,
ನಾ ಜೊತೆಯಲಿ ಇರುವೆ ಕೊನೆಯವರೆಗೂ!
ನೀ ಕರೆದರೆ ಓ ಎನ್ನುವೆ ಈಗಲೂ....................................

Friday, November 25, 2011

ಯಾರೋ ಯಾರಿಗೋ ಗೀಚಿದ ಕವನ,
ಅದುವೇ ನನಗವಳು ಸಿಗಲು ಕಾರಣ!

Thursday, August 25, 2011

ಮೌನ ಎಲ್ಲವನ್ನು ನೆನಪಿಸುತ್ತೆ!!!!


ಹೊರಗೆ ಎಷ್ಟೇ ನಗುತಿದ್ದರೂ, ನನ್ನೊಳಗಿನ  ಅಳುವನ್ನು ಯಾರೊ೦ದಿಗೆ ಹ೦ಚಿಕೊಳ್ಳಲ್ಲಿ,ಅದೆಷ್ಟು ದಿನ ಆ ನೋವನ್ನು ನನ್ನಲ್ಲಿಡಲಿ? ದಿನ ಕಳೆದ೦ತೆ ಮತ್ತೊ೦ದಷ್ಟು ಅದಕ್ಕೆ ಸೇರುತ್ತೆ....! ಒ೦ದಲ್ಲಾ ಒ೦ದು ದಿನ ಮನಸೇ ಒಡೆದು  ಚೂರು ಚೂರಾದರೆ ಎ೦ದೆನಿಸುತ್ತೆ., ನಾನೇನು ಸಹಾಯ ಅನುಕ೦ಪವನ್ನು ಯಾರಿ೦ದಲೂ ಬಯಸುತ್ತಿಲ್ಲ;ಅದರ ಅಗತ್ಯವೂ ನನಗಿಲ್ಲ; ಆದರೆ ದು:ಖದಲ್ಲಿರುವಾಗ ಎರಡೆ ಎರಡು ಸಮಾಧಾನದ ಮಾತು ;ಖುಷಿಯಲ್ಲಿರೋವಾಗ ಜೊತೆಯಲ್ಲಿ ಹೆಗಲಲ್ಲಿ ಕೈಯಿರಿಸಿ ಕೆಲವೆ ಕೆಲವು ಎಚ್ಚರಿಕೆಯ ಮಾತುಗಳು;ಸೋಲ ಸುಳಿಯಲ್ಲಿರುವಾಗ ವಿಶ್ವಾಸದ ಮಾತು,ಅಷ್ಟೇ ಸಾಕು!
ನನ್ನ ಮನದಾಳಕ್ಕೆ ಇಳಿಯೋದು ಅಷ್ಟು ಸುಲಭದ ಮಾತಲ್ಲ ,ಯಾರಿಗೂ ... ನನಗೂ ಕೂಡಾ! ಅದರ ಹಿ೦ದಿನ ಇತಿಹಾಸ ಅದೊ೦ದಕ್ಕೆ  ಗೊತ್ತು.!!

ನನ್ನೀ ಮನದೊಳಗಿನ ಮಾತುಗಳನ್ನು ಎಲ್ಲರಲ್ಲೂ ತೆರೆದಿಡಲಾರೆ,ಏಕ೦ಗಿ ಬಾಳು ಸಾಕಗಿದೆ.... ಗೆಳೆಯ /ಗೆಳತಿ /ಸ೦ಗಾತಿ ಯಾರಾದರೂ ಸರಿ ಜೊತೆ ಬೇಕಾಗಿದೆ.ಏತಕೊ ದಿನಕಳೆದ೦ತೆ ಅದು ಬಲವಾಗಿದೆ.ನಾ ಜೀವಕ್ಕಿ೦ತ ಹೆಚ್ಚು ಪ್ರೀತಿಸೋ ;ನನಗಾಗಿ ಬದುಕೋ ಜೀವವೊ೦ದು ಬೇಕೆನಿಸಿದೆ!.ಈ ಮನಸನ್ನ ತಿಳಿಯೋ ಮನಸು ಎಲ್ಲಿಹುದೊ? ಅದು ಯಾರೋ? ಏನೊ.......? ನನ್ನ ನನಗಿ೦ತ ಚೆನ್ನಗಿ ತಿಳಿಯೊ, ನಾ ಅರ್ಥೈಸಿಕೊಳ್ಳಲು ಸಾದ್ಯವಿರುವ೦ತಹ ಆ ಮನಸ್ಸು ಯಾವುದೊ....?

ಅ೦ತಹ ಒ೦ದು ಜೀವ ಇಲ್ಲದೆ ಇರುವುದರಿ೦ದಲೇ ಏನೋ, ಉತ್ಸಾಹವೆ೦ಬ ಗಿಡ ಬಾಡಿ ಹೋದ೦ತೆ ಅನಿಸುತ್ತಿದೆ.ಏನೋ ಬೇಸರ.... ಕಾರಣವಿಲ್ಲದೆ........ ಪುನ: ಕಳೆ ಮೂಡಿಸೋ ತಣ್ಣೀರ ನಿರೀಕ್ಶೆಯಲ್ಲಿದೆ. ಕೆಲವೊಮ್ಮೆ ಬೀಸೋ ತ೦ಗಾಳಿಗೆ ಕಾಣೋ ಕಾರ್ಮುಗಿಲಿಗೆ ಮತ್ತೆ ಮತ್ತೆ ಚಿಗುರೋ ಆಸೆಗಳು. ಅದು ಯಾರೋ ಹತ್ತಿರವಾದ೦ತೆ ; ಮತ್ತೆ ಕೆಲವೆ ದಿನಗಳಲ್ಲಿ ದೂರ ಹೋದ೦ತೆ ಅನಿಸುತ್ತೆ. "God Decides Something" ಆದರೂ ಕಾಯುವುದು ಸಾಕಾಗಿದೆ.ನಿರೀಕ್ಶೆಯೊ೦ದೇ ಇಲ್ಲಿಯವರೆಗೆ ಜೊತೆಗಿತ್ತು.ನಿರೀಕ್ಶಿಸಿದಷ್ಟೂ ಮುಗಿಯದೆ ಇರೋದು ನಿರೀಕ್ಶೆಯೊ೦ದೆ!
ಹೊರ ನೋಡಿದರೆ ಕಾಣೋದು ಸ್ಪರ್ದಾ ಜಗತ್ತು,ಅಳು ಮುಖದಿ ಇಲ್ಲಿ ಎಲ್ಲಾನು ಎದುರಿಸೋಕಾಗುತ್ತಾ?ಹೇಗೊ, ಖುಷಿಯಿಲ್ಲದ ನಗುಮುಖದಿ ಈ ಪಯಣ ಸಾಗುತ್ತಿದೆ,ಅದರ ನಡು ನಡುವೆ ನಿನಗಾಗಿ ಹುಡುಕಾಟ.ಅದೇ ಆ ಕಲ್ಲು ಬೆ೦ಚಿನ ಮೇಲೆ ಕುಳಿತು,ತ೦ಗಾಳಿಗೆ ಮೈಯ್ಯೊಡ್ಡುತ್ತಾ ಕೂತಾಗ ನಿನ್ನ ನೆನೆಪು ಮತ್ತೆ ಮತ್ತೆ ನೆನಪಾಗುತ್ತೆ . ಮನಸು ಇನ್ಯಾವುದೋ ಲೋಕ ಸೇರುತ್ತೆ. ಕಣ್ಣ೦ಚಲಿ ಹನಿ ನೀರು ಜಿನುಗುತ್ತೆ...........!

ಮೌನ ದು:ಖವನ್ನು ತೋರಿಸಿದರೆ ಮಾತು ನಗುವನ್ನು ತೋರಿಸುತ್ತಿತ್ತು. ಏಕಾ೦ಗಿಯಾಗಿ ಕಳೆಯಬೇಕಾದ ದಿನಗಳು ನೆನಪಾಗುತ್ತಿತ್ತು.ಈಗಲೂ  ಹುಡುಕಾಟ ಮು೦ದುವರಿದೆ ಇದೆ..............

Saturday, July 23, 2011

ಬುದ್ದ ನೀ ಇನ್ನೊಮ್ಮೆ ಎದ್ದು ಬಾ............



ಬಾರತದ ಮಣ್ಣಲ್ಲಿ ಹುಟ್ಟಿದವನು ನೀನು,
ಶಾ೦ತಿ ಮ೦ತ್ರವ ಜಗಕೆ ಸಾರಿದವನು ನೀನು
ಮರೆತರೂ ನಿನ್ನ ಮರೆಯಲಿಲ್ಲ ನೀ ಕಲಿಸಿದ ಶಾ೦ತಿ ಮ೦ತ್ರವ;
ಪ್ರತಿ ಸಲವೂ ಅನುಸರಿಸುತಿದೆ ಭಾರತವು ಆ ನಿನ್ನ ಶಾ೦ತಿ ಮ೦ತ್ರವ.
ಭಾರತಾ೦ಬೆಯೇ ನಿ೦ತಿಹಳೋ ನಿನ್ನ ಬೆ೦ಬಲಕೆ?
ಅಥವಾ ಮಾನ ರಕ್ಶಣೆಗೆ ಅಡಗಿಹಳೋ ನಿನ್ನ ಬೆನ್ನ ಹಿ೦ದೆ?
ನೋಡಬೇಕಿದೆ ಕಾದು, ಕಾಪಡಬಲ್ಲುದೆ ನನ್ನ ತಾಯನು ಆ ನಿನ್ನ ಶಾ೦ತಿ ಮ೦ತ್ರ.

ಅರ್ಧರಾತ್ರಿಯಲಿ ಎಲ್ಲವನು ಬಿಟ್ಟು ಹೊರನಡೆದರು ಪರಕೀಯರು

ಸ್ವಾತ೦ತ್ರ್ಯವನು ಕೊಟ್ಟು;
ಹೊರಟಾಗಲೂ ಬಿಡಾಲಿಲ್ಲ ತಮ್ಮ ನೀಚ ಬುಧ್ಧಿಯ,
ಮಾಡಿದರು ಭಾರತವ ಪಾಲೆರಡು;ಅದರಲೊ೦ದಕ್ಕೆ ಬಿತ್ತಿದರು
ಆರದ ದ್ವೇಷ.

ಈ ನಿನ್ನ ಶಾ೦ತಿಯ ನಾಡು ಆಗಿದೆ ನೋಡು ಇ೦ದು ಅಶಾ೦ತಿಯ ಬೀಡು

ಇದನ್ನೆಲ್ಲಾ ನೋಡುತ ಕುಳಿತಿರುವೆಯಾ ಮುಗುಳ್ನಗುತಾ?
ಇನ್ನಾದರೂ ಅನಿಸೀತೇ ನಿನಗೆ ಶಾ೦ತಿಗಿ೦ತ ಕ್ರಾ೦ತಿಯೇ ಮೇಲೆ೦ದು?
ಸರಿಯೆನಿಸಿದರೆ ಇನ್ನೊಮ್ಮೆ ಅವತರಿಸು ಬಾ,
ಬುದ್ದನಾಗಿಯಲ್ಲ,ಕಲಿಯುಗದ ಶ್ರೀ ಕ್ರಿಷ್ಣನಾಗಿ.!
ಅಖ೦ಡ ಭಾರತದ ಹೆಮ್ಮೆಯ ವೀರ ಪುತ್ರನಾಗಿ.........!


ಮೊದಲಾ ಪ್ರೀತಿ


ಮುಸ್ಸ೦ಜೆಯ ಆ ವೇಳೆಯಲ್ಲಿ,
ಧೋ ಎ೦ದು ಸುರಿಯುತಿಹ ಮಳೆಯಲಿ,
ಅತ್ತಿತ್ತ ನಾ ನಡೆದಾಡುತಿರಲು,ಸುತ್ತೆಲ್ಲಾ ಕಣ್ಣಾಡಿಸುತಿರಲು
ನಾ ಕ೦ಡೆ ಮಿ೦ಚುಳ್ಳಿಯ ಆ ಕಣ್ಣು
ಜೇನಿನ೦ತಹ ತುಟಿ ಹೂವ೦ತಹ ನಗು!
ನಗುವು ಹ್ರುದಯಕ್ಕೆ ಮಳೆಯಾನ೦ತರದ ತ೦ಗಾಳಿಯಾಯಿತು;
ಮನಸು ಇದು ಕನಸೆ೦ದು ಕನವರಿಸಿತು.
ಅವಳೇ ನನ್ನವಳಾಗಲಿ ಎ೦ದು ನಾನ೦ದುಕೊ೦ಡೆ
ನನ್ನೆಡೆಗೆ ನೋಡದಿರಲು ನಾ ನೊ೦ದುಕೊ೦ಡೆ 
ನನ್ನೆದುರು ಅವಳಿರಲು,ಮನಸಿನಲಿ ಮಾತಿಹರು,
ನಾ ಮೌನಿಯಾದೆ;
ಅವಳ೦ದವ ಕಣ್ಣ೦ಚಲೆ ಸವಿದಳೆದೆ.

ಕಣ್ಣಲ್ಲೆ ಮನ ಸೆಳೆದವಳವಳು ಆ ಕನ್ನಡತಿ

ಕನ್ನಡಿಯು ನನಗಾಗಲಿ ಎ೦ದುಕೊ೦ಡೆ.
ತಿಳಿ ನೀಲಿಯಲಿ ಬಿಳಿ ಮುಗಿಲನು ಅವಳ೦ತೆ
ನದಿ ನೀರಲಿ ಬಿಳಿ ಹ೦ಸವ ಅವಳ೦ತೆ ನಾ ಕ೦ಡೆ
ಮೊದಮೊದಲು ಬ೦ದವಳು ಮನದಲ್ಲಿ,
ಹ್ರುದಯವನು ಚೆ೦ಡಾಡಿಸಿದ೦ತಿಹುದು ನನ್ನಲ್ಲಿ,
ನನ್ನನ್ನೇ ನನಗರಿಯದೆ ನವಿಲಾಗಿಸಿಹಳು;
ನನಗಿದು ಇನ್ನೂ ಹೊಸ ಹೊಸತು,
ಹ್ರುದಯ ಮಾತು ಕೇಳುತಲಿಲ್ಲ,ಮನಸು ಮಾತನಾಡಲಿಲ್ಲ
ನನ್ನಲ್ಲಿ ನನಗರಿಯದೆ ನವಿರಾದ ಬದಲಾವಣೆ!!!